ಸೌತಡ್ಕ: ಸೇವಾಭಾರತಿ ಸಂಸ್ಥೆಯ ಟ್ರಸ್ಟಿ ಕೆ. ಜಯರಾಜ್ ಸಾಲ್ಯಾನ್ ಕಾನರ್ಪ ಅವರ ಪುತ್ರಿ ಭಾವನ ಅವರ ಹುಟ್ಟುಹಬ್ಬವನ್ನು ಸೌತಡ್ಕದ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಸನಿವಾಸಿಗಳಿಗೆ ಮತ್ತು ಆರೈಕೆದಾರರಿಗೆ ಒಂದು ಹೊತ್ತಿನ ಊಟವನ್ನು ನೀಡುವುದರೊಂದಿಗೆ ಏ. 25ರಂದು ಸಮಾಜಕ್ಕೆ ಮಾದರಿಯಾಗುವಂತೆ ಹುಟ್ಟುಹಬ್ಬ ಆಚರಿಸಿಕೊಂಡರು.
ಬೇಬಿ. ಭಾವನ ಜಯರಾಜ್ ಕಾನರ್ಪ ಇವರಿಗೆ ಸಂಸ್ಥೆಯ ಪರವಾಗಿ ಶುಭಹಾರೈಸಲಾಯಿತು. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.