Site icon Suddi Belthangady

ಶಿಥಿಲಾವಸ್ಥೆಯಲ್ಲಿ ಹಾರಗಂಡಿ ಸೇತುವೆ

ಬೆಳ್ತಂಗಡಿ: ತಾಲೂಕಿನ ತೋಟತ್ತಾಡಿ ಗ್ರಾಮದ ಹಾರಗಂಡಿ ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಕಳೆದ 5 ವರ್ಷದ ಹಿಂದೆಯೇ ಈ ಸೇತುವೆ ಶಿಥಿಲಗೊಂಡಿದ್ದು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಈ ಸೇತುವೆ ಬಹಳ ಕಿರಿದಾಗಿದ್ದು ಬೈಕ್ ಮತ್ತು ರಿಕ್ಷಾ ಮಾತ್ರ ಸಲೀಸಾಗಿ ಚಲಿಸುತ್ತದೆ. 4 ಚಕ್ರದ ವಾಹನಗಳು ಚಲಿಸಲು ಬಹಳ ಕಷ್ಟವಾಗುತ್ತದೆ. ಕಳೆದ ವರ್ಷದ ಮಳೆಗೆ ಇದು ಕುಸಿದಿದ್ದು ಸ್ಥಳಿಯ ಯುವಕರು ತಾತ್ಕಾಲಿಕವಾಗಿ ಸರಿಪಡಿಸಿದ್ದಾರೆ. ಇನ್ನು ಮಳೆಗಾಲ ಪ್ರಾರಂಭವಾಗುವುದರಿಂದ ನೀರಿನ ಪ್ರವಾಹಕ್ಕೆ ಈ ವರ್ಷ ಇದು ಸಂಪೂರ್ಣವಾಗಿ ಕುಸಿಯುವ ಭೀತಿಯಲ್ಲಿದೆ.

ಬೈಲಂಗಡಿ, ಗಾಣದಕೊಟ್ಟಿಗೆ, ನಂದನದ ನಿವಾಸಿಗಳಿಗೆ ಕಕ್ಕಿಂಜೆಯನ್ನು ಸಂಪರ್ಕಿಸಲು ಇದೇ ಸೇತುವೆ ಆಧಾರವಾಗಿದೆ. ಇದೇ ದಾರಿಯಲ್ಲಿ ಶಾಲಾ ಮಕ್ಕಳು ಸಂಚರಿಸುತ್ತಾರೆ. ಆದ್ದರಿಂದ ಈ ಸೇತುವೆಯನ್ನು ಆದಷ್ಟು ಬೇಗ ಪುನರ್ ನಿರ್ಮಿಸಿ ಕೊಡಬೇಕಾಗಿ ಇಲ್ಲಿನ ನಿವಾಸಿಗಳ ಮನವಿ.

Exit mobile version