ನಾಳ: ಇಲ್ಲಿನ ಮಹಾ ತಿರುವಿನ ಬಳಿ ಅಡಿಕೆ ಲೋಡ್ ಇದ್ದ ಪಿಕಪ್ ಬ್ರೇಕ್ ಫೇಲ್ ಆಗಿ ಗದ್ದೆಗೆ ಬಿದ್ದಿದೆ. ಕೇಳ್ತಾಜೆಯ ಅಡಿಕೆ ವ್ಯಾಪಾರಿ ಹನೀಫ್ ರವರಿಗೆ ಸೇರಿದ ಪಿಕಪ್ ಎಂದು ಗೊತ್ತಾಗಿದ್ದು,ಪಿಕಪ್ ನಲ್ಲಿದ್ದ ಇಬ್ಬರು ಯಾವುದೇ ಗಾಯಗಳಿಲ್ಲದೇ ಬಚಾವಾಗಿದ್ದಾರೆ.
ಬೆಳ್ತಂಗಡಿಯಿಂದ ಪುತ್ತೂರಿಗೆ ಹತ್ತು ಲಕ್ಷದಷ್ಟು ಮೌಲ್ಯದ ಅಡಿಕೆಯನ್ನು ಲೋಡ್ ಮಾಡಿಕೊಂಡು ಹೋಗುವ ವೇಳೆ ಪಿಕಪ್ ಬ್ರೇಕ್ ಫೇಲ್ ಆಗಿರುವುದಾಗಿ ತಿಳಿದುಬಂದಿದೆ. ಪಿಕಪ್ ಬಿದ್ದ ಪಕ್ಕದಲ್ಲೇ ಕೆರೆಯಿದ್ದು, ಅದೃಷ್ಟವಶಾತ್ ಕೆರೆಗೆ ಬೀಳದಿರುವುದರಿಂದ ಇಬ್ಬರು ಬಚಾವಾಗಿದ್ದಾರೆ.