Site icon Suddi Belthangady

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಿಜಯ ಗೋಪುರ ನಿರ್ಮಾಣಕ್ಕೆ ಧರ್ಮಸ್ಥಳದಿಂದ ರೂ. 15 ಲಕ್ಷ ದೇಣಿಗೆ ಹಸ್ತಾಂತರ

ಧರ್ಮಸ್ಥಳ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಾಜಗೋಪುರ ವಿಜಯ ಗೋಪುರದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ವಿಜಯಗೋಪುರ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಿ. ಹರ್ಷೇಂದ್ರ ಕುಮಾರ್ ರವರು ರೂ. 15 ಲಕ್ಷ ದೇಣಿಗೆಯ ಚೆಕ್ ಉಜಿರೆ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೇಸರ ಶರತ್ ಕೃಷ್ಣ ಪಡುವೆಟನ್ನಾಯರಿಗೆ ಹಸ್ತಾಂತರಿಸಿದರು.

ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲಕ್ಷ್ಮೀ ಗ್ರೂಪ್ ಕೆ.ಮೋಹನ್ ಕುಮಾರ್, ರಾಘವೇಂದ್ರ ಬೈಪಾಡಿತ್ತಾಯ, ಮಂಜುನಾಥ್ ಕಾಮತ್, ಗಣೇಶ್ ಇಂಜಿನಿಯರ್, ರವಿ ಚಕ್ಕಿತ್ತಾಯ, ರಾಮಣ್ಣ ಗೌಡ, ವಿಶ್ವನಾಥ ಶೆಟ್ಟಿ, ಸಂಜೀವ ಕೆ. ರಾಘವೇಂದ್ರ ಪ್ರಿಂಟರ್ಸ್‌, ರಾಘವೇಂದ್ರ ಗೌಡ ಪಾರ, ರವೀಂದ್ರ ಶೆಟ್ಟಿ, ಪ್ರಶಾಂತ್‌ ಜೈನ್, ದಿನೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Exit mobile version