Site icon Suddi Belthangady

ಮರುಮೌಲ್ಯ ಮಾಪನದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್

ಉಜಿರೆ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತುಷಾರ ಬಿ.ಎಸ್. ಮರುಮೌಲ್ಯಮಾಪನಲ್ಲಿ ಒಂದು ಅಂಕವನ್ನು ಹೆಚ್ಚಿಸಿಕೊಂಡಿದ್ದು ಒಟ್ಟು596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 4ನೇ ರ‍್ಯಾಂಕ್ ಗಳಿಸಿರುತ್ತಾರೆ.

ಈ ವಿದ್ಯಾರ್ಥಿನಿಗೆ ಮೊದಲು ಇಂಗ್ಲೀಷ್ ವಿಷಯದಲ್ಲಿ 96 ಅಂಕಗಳು ಬಂದಿದ್ದು ಒಟ್ಟು 595 ಅಂಕಗಳು ಲಭಿಸಿತ್ತು, ಮರು ಮೌಲ್ಯ ಮಾಪನದಲ್ಲಿ 97 ಅಂಕಗಳನ್ನು ಗಳಿಸಿ ಒಟ್ಟು 596 ಅಂಕಗಳನ್ನು ಗಳಿಸಿರುತ್ತಾರೆ.

ಇವರನ್ನು ಆಡಳಿತ ಮಂಡಳಿ, ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.

Exit mobile version