Site icon Suddi Belthangady

ಸುಲ್ಕೇರಿಯಲ್ಲಿ ಲಾರಿ ಗೂಡ್ಸ್ ವಾಹನಕ್ಕೆ ಡಿಕ್ಕಿ: ಲಾರಿ ಚಾಲಕ ಪರಾರಿ

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ನರ್ಸರಿ ಬಳಿ ಲಾರಿಯೊಂದು ಗೂಡ್ಸ್ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ಎ. 24ರಂದು ರಾತ್ರಿ 10.30 ಗಂಟೆಗೆ ಸುಲ್ಕೇರಿ ನರ್ಸರಿ ಬಳಿ ಲಾರಿ ಚಾಲಕ ದುಡುಕುತನದಿಂದ ಒಮ್ಮೆಲೆ ರಸ್ತೆಯ ಬಲಬದಿಗೆ ಚಲಾಯಿಸಿದ ಪರಿಣಾಮ ನಾರಾವಿ ಕಡೆಯಿಂದ ಬರುತ್ತಿದ್ದ ಕಾಯರ್ತಡ್ಕ ಗ್ರಾಮದ ಕಳಂಜ ಮರಕಡ ನಿವಾಸಿ ಗಣೇಶ್ ಗೌಡ (49ವ)ರವರ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆ ಬಳಿಕ ಲಾರಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾರೆ.

ಅಪಘಾತದಿಂದ ಗಣೇಶ್ ಗೌಡ ರವರ ವಾಹನ ಜಖಂಗೊಂಡಿದ್ದಲ್ಲದೇ ಅವರಿಗೆ ಗಾಯವಾಗಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕ ಹಾಗೂ ವಾಹನವನ್ನು ಏ.25 ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version