Site icon Suddi Belthangady

ಎಕ್ಸೆಲ್ – ಬೆಳಕು: ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗುರುವಾಯನಕೆರೆ: ಪಿಯು ಬೋರ್ಡ್ ಪರೀಕ್ಷೆ, NEET, JEE- IIT, CET, NDA ಪರೀಕ್ಷೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಎಕ್ಸೆಲ್ ವಿದ್ಯಾಸಂಸ್ಥೆ ಕಳೆದ ವರ್ಷಗಳಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು AIIMS ಗೆ ಕಳುಹಿಸಿದ ಸವಿನೆನಪಿಗಾಗಿ, ಓದುವ ಹಂಬಲ ಉಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಸಮಾಜಮುಖಿ ಹೆಜ್ಜೆಯನ್ನಿಟ್ಟಿದೆ.

ಗುಣಮಟ್ಟದ ಶಿಕ್ಷಣಕ್ಕೆ ಹಂಬಲಿಸುವ ಯುವಪೀಳಿಗೆಗೆ ಹಣವೊಂದು ಅಡಚಣೆ ಆಗಬಾರದು ಎನ್ನುವುದು ಈ ಯೋಜನೆಯ ಆಶಯವಾಗಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕವನ್ನು ಸಂಪೂರ್ಣವಾಗಿ ವಿನಾಯ್ತಿಗೊಳಿಸಲಾಗುವುದು ಅಥವಾ ವಿಷೇಶವಾದ ವಿದ್ಯಾರ್ಥಿವೇತನವನ್ನು ನೀಡಲಾಗುವುದು.

ಆಸಕ್ತರು ಈ ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯಲ್ಲಿ ವಿದ್ಯಾರ್ಥಿಯ ಹೆಸರು, ವಿಳಾಸ ದೂರವಾಣಿ ಸಂಖ್ಯೆ, ಶಾಲೆಯ ಹೆಸರು ಮತ್ತು ಆಧಾರ್ ಕಾರ್ಡ್ ಫೋಟೋವನ್ನು ಮೆಸೇಜ್ ಮೂಲಕ ಕಳುಹಿಸತಕ್ಕದ್ದು. ವಾಟ್ಸಾಪ್ ಸಂಖ್ಯೆ – 8867242769, 8867146086

Exit mobile version