Site icon Suddi Belthangady

ಎಕ್ಸೆಲ್ ಗುರುವಾಯನಕೆರೆಯಲ್ಲಿ ನರ್ಸರಿ, ಎಲ್.ಕೆ.ಜಿ, ಯು. ಕೆ.ಜಿ ಹಾಗೂ ಒಂದನೇ ತರಗತಿ ಪ್ರಾರಂಭ

ಗುರುವಾಯನಕೆರೆ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ರಾಜ್ಯ – ರಾಷ್ಟ್ರಮಟ್ಟದಲ್ಲಿ ಅನನ್ಯ ಸ್ಥಾನ ಗಳಿಸಿಕೊಂಡ ಎಕ್ಸೆಲ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಈ ಶೈಕ್ಷಣಿಕ ವರ್ಷದಿಂದ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಆಂಗ್ಲ ಮಾಧ್ಯಮದ 1ನೇ ತರಗತಿ ಪ್ರಾರಂಭಗೊಳ್ಳಲಿದೆ.

ಆಯಾ ಕ್ಷೇತ್ರಗಳಲ್ಲಿ 20 ವರ್ಷಗಳಿಗೂ ಮೀರಿದ ಅನುಭವ ಇರುವ ಶಿಕ್ಷಕರು ಬೋಧಿಸಲಿದ್ದಾರೆ. ಆಕರ್ಷಕ ತರಗತಿ ಕೋಣೆ, ಮಕ್ಕಳ ವಯೋಮಾನಕ್ಕೆ ಸೂಕ್ತ ಪೀಠೋಪಕರಣಗಳು, ಆಟಿಕೆ ವಸ್ತುಗಳು, ಆಟದೊಂದಿಗೆ ಪಾಠ, ಆಂಗ್ಲ ಭಾಷಾ ಪ್ರಾವೀಣ್ಯತೆ, ಭಾರತೀಯ ಸಂಸ್ಕೃತಿಯ ಮೈಗೊಡಿಸುವಿಕೆ, ನಾಡು – ನುಡಿಯ ಅಭಿಮಾನ ಸೇರಿದಂತೆ ಮಗುವಿನ ಸರ್ವತೋಮುಖ ಬೆಳವಣಿಗೆಯೆ ಧ್ಯೇಯವಾಗಿ ಶಾಲೆ ನಿರಂತರ ಚಟುವಟಿಕೆಯ ಕೇಂದ್ರವಾಗಿ ಮುನ್ನಡೆಯಲಿದೆ.

ಬೆಳ್ತಂಗಡಿ ಹಾಗೂ ಆಸುಪಾಸಿನ ಹೆತ್ತವರ ಬೇಡಿಕೆಗೆ ಸ್ಪಂದಿಸಿ, ವೇಣೂರಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುವುದರ ಜೊತೆಗೆ, ಗುರುವಾಯನಕೆರೆಯಲ್ಲೂ ನೂತನ ಶಾಲೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880899769 , 9900626441 ಸಂಪರ್ಕಿಸಲು ಕೋರಲಾಗಿದೆ.

Exit mobile version