Site icon Suddi Belthangady

ಕೋಟಕ್ ಲೈಫ್: ಬಿಸು ಹಬ್ಬ ಆಚರಣೆ – ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಹುತಾತ್ಮರಾದವರಿಗೆ ಶ್ರದ್ಧಾಂಜಲಿ

ಬೆಳ್ತಂಗಡಿ: ಬಿಸು ಹಬ್ಬದ ಆಚರಣೆಯ ಆರಂಭದಲ್ಲಿ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಹತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಕೋಟಕ್ ಬೆಳ್ತಂಗಡಿ ಬ್ರಾಂಚ್ ನಲ್ಲಿ ಎ. 24ರಂದು ಏರ್ಯ ಆ್ಯಡ್ ಮ್ಯಾನೇಜರ್ ಮಂಗಳೂರು ಹಾಗೂ ಮಂಗಳೂರು ಚೀಫ್ ಎಜೇಂನ್ಸಿ ಪಾರ್ಟ್ ನರ್ ಪದ್ಮ ಬೆಳಚಡರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ಪದ್ಮ ಬೆಳಚಡರವರು ಮಾತನಾಡಿ ಬೆಳ್ತಂಗಡಿ ಕೋಟಕ್ ಲೈಫ್ ನ ಪ್ರಥಮ ಆರ್ಥಿಕ ವರ್ಷ ಹಾಗೂ ತುಳುನಾಡಿನ ಆರ್ಥಿಕ ಸಮೃದ್ಧಿಗೂ ಈ ಬಿಸು ಹಬ್ಬದ ಮೂಲಕ ಚಾಲನೆಯಾಗುತ್ತದೆ. ಕೃಷಿ ಆಗಲಿ ಅಥವಾ ಯಾವುದೇ ಕೆಲಸವಾಗಲಿ ಮನಸಿಟ್ಟು ಕೆಲಸ ಮಾಡಿದರೆ ಕನಸುಗಳು ಈಡೇರಲು ಹಣ ಜೊತೆಯಾಗುತ್ತದೆ. ಈ ಆರ್ಥಿಕ ವರ್ಷ ಎಲ್ಲರ ಮೆಲೈಸಲಿ ಎಂದು ಶುಭ ಹಾರೈಸಿದರು.

ಏರ್ಯ ಆ್ಯಡ್ ಮ್ಯಾನೇಜರ್ ಮೈಕಲ್ ಡಿಸೋಜ ಮಾತನಾಡಿ ಬೆಳ್ತಂಗಡಿ ಬ್ರಾಂಚ್ ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಷ್ಟ್ರೀಯ ಮಟ್ಟದಲ್ಲಿ 6ನೇ ಸ್ಥಾನ ಪಡೆದಿದೆ. ಈ ಸ್ಥಾನಮಾನಗಳನ್ನು ಉಳಿಸಿ ಬೆಳೆಸಲು ಪ್ರಸ್ತುತ ಆರ್ಥಿಕ ವರ್ಷಕ್ಕೆ ಈ ಬಿಸು ಹಬ್ಬವು ಜೊತೆಯಾಗಿದೆ. ಯಶಸ್ಸು ನಿರಂತರತೆ ಬೆಳ್ತಂಗಡಿ ಬ್ರಾಂಚ್ ನದ್ದು ಆಗಲಿ ಗ್ರಾಹಕರಿಗೆ ಜೀವನ ಭದ್ರತೆ ಜ್ಞಾನ ನೀಡುವುದು ಸಹ ಸಮಾಜಸೇವೆಯಾಗುತ್ತೆ ಎಂದರು.

ಉದಯ ಕುಮಾರ್ ಅಗಲಿ ಕಣಿಯೂರ್ ಬಿಸು ಹಬ್ಬದ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಒಳಾಂಗಣ ಸ್ಪರ್ಧೆಗಳು ನಡೆದು ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಚೀಫ್ ಎಜೆಂನ್ಸಿ ಪಾರ್ಟ್ ನರ್ ದಿನಕರ್ ಕೊಕ್ಕಡ, ಗಿರೀಶ್ ಬಿ. ಜಿ., ಸೀನಿಯರ್ ಎಜೇಂನ್ಸಿ ಪಾರ್ಟ್ ನರ್ ಪ್ರದೀಪ್ ಶೆಟ್ಟಿ, ಯೋಗೀಶ್ ಅಲಂಬಿಲ ಹಾಗೂ ಬೆಳ್ತಂಗಡಿ, ಪುತ್ತೂರು, ಕಡಬ ಪಾರ್ಟ ನರ್ ಅಡ್ವೋಯಿಸರ್ ಗಳು, ಸೀನಿಯರ್ ಮ್ಯಾನೇಜರ್ ಪ್ರಜ್ವಲ್, ದುರ್ಗಾಪ್ರಸಾದ್, ರವಿ ಸಚಿನ್, ಕಚೇರಿ ಸಿಬಂದ್ದಿಗಳು ಉಪಸ್ಥಿತರಿದ್ದರು. ವಾರಿಜರವರ ಪ್ರಾರ್ಥನೆ ಮೂಲಕ ಆರoಬಿಸಿದ ಕಾರ್ಯಕ್ರಮವನ್ನು ಕಡಬ ಪಾರ್ಟ್ ನರ್ ನಾಗರಾಜ್ ಎನ್. ಕೆ. ಸ್ವಾಗತಿಸಿದರು. ಸಚಿನ್ ನಿರೂಪಿಸಿದರು.

Exit mobile version