Site icon Suddi Belthangady

ಕೊಕ್ಕಡ ಪಂಚಾಯಿತಿ ವ್ಯಾಪ್ತಿಯ ಬೀದಿ ದೀಪಗಳ ಉದ್ಘಾಟನೆ

ಕೊಕ್ಕಡ: ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾವೀರ ಕಾಲೋನಿ ಸಂಪರ್ಕ ರಸ್ತೆಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅಳವಡಿಸಲಾದ ಬೀದಿ ದೀಪವನ್ನು ಕೊಕ್ಕಡ ಪಾಕ್ಸ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಸತ್ಯ ಸಾರಮಣಿ ದೈವಸ್ಥಾನ ಅಧ್ಯಕ್ಷ ಗಿರೀಶ್ ಮಹಾವೀರ ಕಾಲೋನಿಯವರು ಗುಂಡಿ ಒತ್ತುವ ಮೂಲಕ ಉದ್ಘಾಟನೆ ಮಾಡಿದರು.

ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ರಸ್ತೆಯಲ್ಲಿ ಅಳವಡಿಸಲಾದ ಬೀದಿ ದೀಪವನ್ನು ಕೊಕ್ಕಡ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಗೌಡ ಉದ್ಘಾಟನೆ ಮಾಡಿದರು. ಕೊಕ್ಕಡ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ, ಸದಸ್ಯ ಜಗದೀಶ್ ಕೆಂಪಕೋಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಭಾರತಿ, ಕೊಕ್ಕಡ ಪ್ಯಾಕ್ಸ್ ನಿರ್ದೇಶಕ ಶ್ರೀನಾಥ್ ಬಡೆಕಾಯಿಲ್, ಕಾಮಗಾರಿ ನಡೆಸಿದ ಪುರುಷೋತ್ತಮ್ ಕೊಕ್ಕಡ, ಮೆಸ್ಕಾಂ ಇಲಾಖೆಯಿಂದ ಸೀನಿಯರ್ ಪವರ್ ಮ್ಯಾನ್ ರವಿ, ಇನ್ನೊರ್ವ ಪವರ್ ಮ್ಯಾನ್ ಎಸ್. ಕುಮಾರ್, 237ನೇ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಶಶಿ ತಿಪ್ಪಮಜಲ್, ಕಾರ್ಯದರ್ಶಿ ಶ್ರೀಧರ್ ಬಳಕ್ಕ ಉಪಸ್ಥಿತರಿದ್ದರು.

Exit mobile version