Site icon Suddi Belthangady

ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕೆ ಸಹಕಾರ ನೀಡಿದ ಬೆಳ್ತಂಗಡಿಯ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ ಪಿರೇರಾ ಹಾಗೂ ಸಂಸ್ಥೆಯ ಮುಖ್ಯ ಪ್ರಬಂಧಕ ಐರಿನ್ ಡಿಸೋಜ ಹಾಗೂ ಸಿಬ್ಬಂದಿಗಳನ್ನು ಬ್ಯಾಂಕ್‌ ನಿರ್ದೇಶಕ ಧರಣೇಂದ್ರ ಗೌರವಿಸಿದರು.

ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಕೇಂದ್ರ ಕಚೇರಿಯ ಪರವಾಗಿ ಬೆಳ್ತಂಗಡಿ ಶಾಖಾ ಕಛೇರಿ ವತಿಯಿಂದ ಗೌರವ ಸ್ವೀಕರಿಸಿದ ಲ್ಯಾನ್ಸಿ ಪಿರೇರ, ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಸಿಬ್ಬಂದಿಗಳ ಕಾರ್ಯ ಮೆಚ್ಚುವ ರೀತಿಯಲ್ಲಿ ಇರುವ ಕಾರಣ ನಮ್ಮ ಸಂಸ್ಥೆಯು ಕೂಡ ತಮ್ಮ ಬ್ಯಾಂಕಿನೊಂದಿಗೆ ಸದಾ ಸಹಕಾರಕ್ಕೆ ಬದ್ಧವಾಗಿದೆ. ತಮ್ಮ ಈ ಸೇವೆಯು ಮುಂದೆಯು ಕೂಡ ಇದೇ ರೀತಿ ಮುಂದುವರೆಯಲಿ, ಅದೇ ರೀತಿಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ನಮ್ಮ ಸಹೋದರ ಧರಣೇಂದ್ರ ರವರು ಕೂಡ ಉತ್ತಮ ಸೇವೆಯನ್ನು ಮಾಡುವಂತಾಗಲಿ ಎಂದರು. ಬೆಳ್ತಂಗಡಿ ಶಾಖಾ ಪ್ರಬಂಧಕ ಚೇತನ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಗಣೇಶ್ ಮತ್ತು ಅನಿಲ್ ಕುಮಾರ್ ಕೆ ಜಿ ಉಪಸ್ಥಿತರಿದ್ದರು.

Exit mobile version