Site icon Suddi Belthangady

ಸಿವಿಲ್‌ ಇಂಜಿನಿಯರಿಂಗ್ ಪ್ರಾಜೆಕ್ಟ್ ಅವಿಷ್ಕಾರಕ್ಕೆ ಇಂಗ್ಲೆಂಡ್ ಮೂಲದ ಪೇಟೆಂಟ್ ಲಭ್ಯ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡ ಆವಿಷ್ಕಕರಿಸಿದ ‘ಬಿದಿರು ಬಳಸಿ ಗಾರೆ ಮತ್ತು ಇಟ್ಟಿಗೆ ಮಿಶ್ರಣ ತಯಾರಿಕಾ ಯಂತ್ರ’ (Mortar and Mud Block Moulding Machine Utilizing Bamboo) ಪೇಟೆಂಟ್ ದೊರಕಿದೆ.

ಪ್ರಾಧ್ಯಾಪಕರಾದ ವಿನಯ್‌ ಶ್ಯಾಮ್ ಮತ್ತು ಸುಭ್ರಹ್ಮಣ್ಯ ಶರ್ಮ ಹಾಗೂ ವಿದ್ಯಾರ್ಥಿಗಳಾದ ಸುಮಂತ್‌ಕುಮಾರ್, ಈಶ್ವರ್ ಮತ್ತು ವಿದ್ಯಾಧರ್ ಇವರನ್ನು ಒಳಗೊಂಡ ತಂಡಕ್ಕೆ ಈ ಪೇಟೆಂಟ್ ಲಭಿಸಿರುತ್ತದೆ. ಇವರ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.-ಡಾ.ಅಶೋಕ್ ಕುಮಾರ್

Exit mobile version