Site icon Suddi Belthangady

ಜಮ್ಮು-ಕಾಶ್ಮೀರ ಅಮಾಯಕ ನಾಗರಿಕರ ಹತ್ಯೆಗೈದ ಉಗ್ರರಿಗೆ ತಕ್ಕ ಶಾಸ್ತಿ ಆಗಬೇಕಿದೆ-ಭಯೋತ್ಪಾದನೆಯ ಶಾಶ್ವತ ನಿರ್ಮೂಲನೆಗೆ ಶಾಂತಿಪ್ರಿಯ ದೇಶಗಳ ನಡುವಿನ ಜಾಗತಿಕ ಒಗ್ಗಟ್ಟೇ ಇಂದಿನ ಅನಿವಾರ್ಯತೆಯಾಗಿದೆ. -ಸಂದೀಪ್ ಎಸ್. ನೀರಲ್ಕೆ ಅರ್ವ

ಜಮ್ಮು- ಕಾಶ್ಮೀರದ ಪಹಲ್ಗಾಮ್ ನಲ್ಲಿ ಘಟಿಸಿದ ಭೀಕರ ನರಮೇಧ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಅಮಾಯಕ ಪ್ರವಾಸಿಗರ ಮೇಲಾದ ಉಗ್ರರ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಉಗ್ರರನ್ನು ಸದೆಬಡಿಯಬೇಕಿದೆ. ಅಮಾಯಕರ ಸಾವಿಗೆ ನ್ಯಾಯ ಒದಗಿಸುವ ಹಾಗೂ ಅವರ ಕುಟುಂಬಗಳಿಗೆ ಆಸರೆಯಾಗಿ ನಿಲ್ಲುವ ಕೆಲಸವನ್ನು ಸರ್ಕಾರಗಳು ಮಾಡಬೇಕು
ಜಮ್ಮುಕಾಶ್ಮೀರದಲ್ಲಿ ಸಿಲುಕಿರುವ ಪ್ರವಾಸಿಗ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸೂಕ್ತ ರೀತಿಯ ವ್ಯವಸ್ಥೆಯನ್ನು ರೂಪುಗೊಳಿಸುತ್ತಿದೆ.

ದೇಶದ ಆಂತರಿಕ ಸುರಕ್ಷತೆ ಹಾಗೂ ನಾಗರಿಕ ಸಮಾಜದ ಶಾಂತಿಯುತ ಬಾಳ್ವೆಗೆ ಅಪಾಯಕಾರಿ ಮುಳ್ಳಾಗಿರುವ ಭಯೋತ್ಪಾದನೆಯನ್ನು ಬೇರುಮಟ್ಟದಿಂದಲೇ ನಿರ್ಮೂಲನೆಗೊಳಿಸಲು ಶಾಂತಿಪ್ರಿಯ ದೇಶಗಳ ನಡುವೆ ಜಾಗತಿಕ ಒಗ್ಗಟ್ಟು ಇಂದಿನ ಅನಿವಾರ್ಯತೆ ಆಗಿದೆ. ಈ ಘಟನೆಯಿಂದ ದೇಶಾದ್ಯಂತ ಅಘಾತ,ದುಃಖ ಹಾಗೂ ಉಗ್ರ ಸಂಘಟನೆಯ ವಿರುದ್ಧ ಆಕ್ರೋಶವನ್ನು ಮೂಡಿಸಿದೆ,ಮಡಿದ ನಾಗರಿಕರಿಗೆ ಭಾವಪೂರ್ಣ ವಿದಾಯ ಹಾಗೂ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಸಂದೀಪ್ ಎಸ್. ನೀರಲ್ಕೆ ತಿಳಿಸಿದರು.

Exit mobile version