Site icon Suddi Belthangady

ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ

ನಡ: ಮೇ. 4ರಂದು ಗ್ರಾಮದ ನರಸಿಂಹ ಗಡ ಕ್ಷೇತ್ರದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣದ ಆಮಂತ್ರಣ ಪತ್ರಿಕೆಯನ್ನು ತಾಲೂಕಿನ ಪ್ರಮುಖರಿಗೆ ವಿತರಿಸಲಾಯಿತು. ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಬಹಳ ವಿಜ್ರಂಬಣೆಯಿಂದ ನಡೆಸುವ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಮೇ. 3ರಂದು ಹಾಗು 4ರಂದು ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ. ಕಲ್ಯಾಣೋತ್ಸವವು ಮಾನ್ಯ ಶಾಸಕ, ಕಲ್ಯಾಣೋತ್ಸವ ಸಮಿತಿಯ ಗೌರವ ಅಧ್ಯಕ್ಷ ಹರೀಶ್ ಪೂಂಜಾರವರ ನೇತೃತ್ವದಲ್ಲಿ ಜರುಗಲಿದೆ.

ಕಲ್ಯಾಣೋತ್ಸವ ಸಮಿತಿಯ ಗೌರವ ಸಲಹೆಗಾರ ಶಶಿಧರ್ ಶೆಟ್ಟಿ ಬರೋಡ, ಗೌರವ ಅಧ್ಯಕ್ಷ ಹರೀಶ್ ಪೂಂಜ, ಸಮಿತಿಯ ಕೋಶಾಧಿಕಾರಿಗಳಾದ ಪುರುಷೋತ್ತಮ ಶೆಣೈ, ಚಂದ್ರಶೇಖರ ಬೋಜಾರ, ಉಪಾಧ್ಯಕ್ಷ ಅಜಿತ್ ಆರಿಗ ಹಾಗೂ ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ, ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಸಂಚಾಲಕ ನವೀನ್ ನೆರಿಯ ಇವರುಗಳು ಉಪಸ್ಥಿತರಿದ್ದರು.

Exit mobile version