ಬೆಳ್ತಂಗಡಿ: ಜೈ ಭೀಮ್ ಯುವಸೇನೆ ಕರಂಬಾರು, ಶಿರ್ಲಾಲು ಇದರ ಜಂಟಿ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಹಾಗೂ ದಲಿತ ಬಾಂಧವರಿಗೆ ತಾಲೂಕು ಮಟ್ಟದ ಅಟೋಟ ಸ್ಪರ್ಧೆಯು ಎ. 20ರಂದು ಗ್ರಾಮ ಪಂಚಾಯತ್ ವಠಾರ, ಶಿರ್ಲಾಲುವಿನಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಎಮ್. ಎನ್. ತುಳುಪುಳೆ ಇವರು ನೇರವೇರಿಸಿ ಉದ್ಘಾಟನಾ ಭಾಷಣವನ್ನು ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜೈ ಭೀಮ್ ಯುವ ಸೇನೆಯ ಅಧ್ಯಕ್ಷ ಪ್ರವೀಣ್ ಮುಳಿಗುಡ್ಡೆ ವೇದಿಕೆಯಲ್ಲಿ ಆಸೀನರಾಗಿದ್ದರು. ಬಾಬು ಎ. ರವರು ಸ್ವಾಗತ ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ರಮೇಶ್ ಆರ್. ಸಂಚಾಲಕ ಡಿ.ಎಸ್.ಎಸ್. ಬೆಳ್ತಂಗಡಿರವರು ಅಂಬೇಡ್ಕರ್ ರವರ ವಿಚಾರದ ಬಗ್ಗೆ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ಶುಭಕೋರಿದರು. ಅತಿಥಿಯಾಗಿ ಆಗಮಿಸಿದ ರಘು ಧರ್ಮಸೇನಾ ರವರು ಮಾತನಾಡಿ ಕಾರ್ಯಕ್ರಮ ಶುಭಕೋರಿದರು. ಮತ್ತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿರ್ಲಾಲು ಪಂಚಾಯತ್ ಅಧ್ಯಕ್ಷೆ ಉಷಾ ಎಂ.ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದರೆಗುಡ್ಡೆ ರಾಜು, ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ್ ಎಂ.ಬಿ.ಕೆ.,ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬೆಳ್ತಂಗಡಿ ವಸಂತ್, ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯೆ ಸುಶೀಲಾ, ಶ್ರೀ ಸತ್ಯ ಮುಪ್ಪಣ್ಯ ದೈವಸ್ಧಾನ ನೆಲ್ಲಿಗುಡ್ಡೆ ಶಿರ್ಲಾಲು ಆಡಳಿತ ಮೊಕ್ತೇಸರರು ಕಿಟ್ಟ ಸಾಲಿಯಾನ್, ದಲಿತ ಮುಖಂಡ ಚಂದ್ರಹಾಸ, ಅಳಂದಗಡಿ ಗ್ರಾಮ ಪಂಚಾಯತ್ ಸದಸ್ಯೆ ಲಲಿತಾ ಆಸೀನರಾಗಿದ್ದರು.
ಈ ಕಾರ್ಯಕ್ರಮದ ಸ್ವಾಗತವನ್ನು ಕರಂಬಾರು ಶಿಕ್ಷಕ ಸದಾಶಿವ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಸುಕೇಶ್ ಮಾಲಾಡಿ ನೆರವೇರಿಸಿದರು. ಶ್ವೇತಾ ಎ. ಮುಳಿಬೆಟ್ಟು ಧನ್ಯವಾದ ಸಲ್ಲಿಸಿದರು.