ತೋಟತ್ತಾಡಿ: ಇತಿಹಾಸ ಪ್ರಸಿದ್ಧ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೆ. 22ರಂದು ನಡೆಯುವ 2ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಲೋಕಯ್ಯ ಪೂಜಾರಿ ಬರಮೇಲು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವಾಕರ ಪೂಜಾರಿ ಕಳೆಂಜೊಟ್ಟು, ಸದಸ್ಯರುಗಳಾದ ಸನತ್ ಕುಮಾರ್ ಮೂರ್ಜೆ, ಚಂದ್ರಶೇಖರ ಗೌಡ ಪರಾರಿ, ದಿನೇಶ್ ನಾಯ್ಕ ಕೋಟೆ, ವಿಜಯ ಗೌಡ ಅಗರಿ, ಬಾಲಕೃಷ್ಣ ಗೌಡ ಪಾದೆ, ಚಂದ್ರಾವತಿ ಗೌಡ ಪರಾರಿ, ದಮಯಂತಿ ಕಜೆ, ಭಜನಾ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅಗರಿ, ಕಾರ್ಯದರ್ಶಿ ಸತೀಶ್ ಪೂಜಾರಿ ಮೂರ್ಜೆ, ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಶಶಿಧರ ಗೌಡ ಪಿತ್ತಲು, ಉಪಾಧ್ಯಕ್ಷರುಗಳಾದ ಗುರುವಪ್ಪ ಭಂಡಾರಿ ಆಗರಿ, ಆನಂದ ಪೂಜಾರಿ ನೆಲ್ಲಿಗುಡ್ಡೆ, ಶ್ರೀಧರ ಮುಗೇರ ಮುಂಡೈಲು, ಅಭಿಜಿತ್ ಬರಮೇಲು ಉಪಸ್ಥಿತರಿದ್ದರು.