Site icon Suddi Belthangady

ಅಳದಂಗಡಿ: ಕೆದ್ದುವಿನಲ್ಲಿ ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ – ಹಲವರಿಗೆ ಗಂಭೀರ ಗಾಯ – ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲು

ಅಳದಂಗಡಿ: ಗುರುವಾಯನಕೆರೆ- ಅಳದಂಗಡಿಯ ಕೆದ್ದುವಿನಲ್ಲಿ ಕಾರು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯರು ಸೇರಿದಂತೆ ಹಲವರು ಗಂಭೀರ ಗಾಯಗೊಂಡ ಘಟನೆ ಎ.21 ನಡೆದಿದೆ.

ಬೆಳ್ತಂಗಡಿಯಿಂದ ಅಳದಂಗಡಿ ಕಡೆ ಬರುತ್ತಿದ್ದ ಕಾರು, ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಸಾಗುತ್ತಿದ್ದ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಸ್ಥಳಿಯರ ಸಹಕಾರದಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಠೆ ತಿಳಿದು ಬರಬೇಕಾಗಿದೆ.

Exit mobile version