ಬೆಳ್ತಂಗಡಿ: ರಾಷ್ಟ್ರಮಟ್ಟದಲ್ಲಿ ಐ ಐ ಟಿ/ ಎನ್ ಐ ಐ ಟಿ/ ಐ ಐ ಐ ಟಿ ಗಳಿಗೆ ಪ್ರವೇಶ ಕಲ್ಪಿಸುವ ಜೆ ಇ ಇ ಸೆಕೆಂಡ್ ಶಿಫ್ಟ್ ನಲ್ಲೂ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ.
ವೀರಭದ್ರೇಶ್ ಕಟಗರಿ ರಾಷ್ಟ್ರ ಮಟ್ಟದಲ್ಲಿ 111 ರಾಂಕ್ ಪಡೆದು ಮಹತ್ವದ ಸಾಧನೆ ಮಾಡಿದ್ದಾರೆ. ಪ್ರವನ್ ಪೊನ್ನಪ್ಪ – 99.7214, ನಿಶಾನ್ ಜೈನ್ 99.2163, ವಿನೀತ್ ಎಸ್ ಅಣ್ಣ 99.3113, ಅರುಲ್ ಡಿಸೋಜ 99.2832, ಅನೂಜ್ ಜೆ ಎಸ್ 99.2461, ಗೌತಮ್ 98.7889, ಪ್ರೀಮಲ್ 98.0071, ಸಂಜಯ್ ಎಚ್.ವಿ 97.3126, ಹೊಂಗಿರಣ 96.2421 ಆನಂದ್ ರೆಡ್ಡಿ 96.1321 ಪರ್ಸಂಟೇಲ್ ಪಡೆದು ಕೊಂಡಿದ್ದಾರೆ. 95 ಶೇಕಡಾವಾರಿಗಿಂತ ಹೆಚ್ಚು 54 ವಿದ್ಯಾರ್ಥಿಗಳು, 90 ಕ್ಕಿಂತ ಹೆಚ್ಚು 123 ವಿದ್ಯಾರ್ಥಿಗಳು ಪರ್ಸಂಟೇಲ್ ಪಡೆದುಕೊಂಡಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.