Site icon Suddi Belthangady

ಕಾಂಗ್ರೆಸ್ ಸಮಾವೇಶದ ಬ್ಯಾನರ್ ಹರಿದ ಕಿಡಿಗೇಡಿಗಳು

ಗುರುವಾಯನಕೆರೆ: ಎ. 20ರಂದು ಶಕ್ತಿನಗರದಲ್ಲಿ ನಡೆಯಲಿರುವ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದ ಘಟನೆ ಎ. 19 ರಂದು ಗುರುವಾಯನಕೆರೆಯಲ್ಲಿ ನಡೆದಿದೆ.

ಘಟನೆಯನ್ನು ಖಂಡಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ” ಪಕ್ಷದ ಬೆಳವಣಿಗೆಯನ್ನು ಸಹಿಸದೆ ಬಿಜೆಪಿ ಕಾರ್ಯಕರ್ತರು ಹತಾಶೆಯಿಂದ ಈ ವಿಕೃತ ಕಾರ್ಯ ನಡೆಸಿದ್ದಾರೆ. ಇಂತಹ ಕಾರ್ಯದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮತ್ತು ಪಕ್ಷವನ್ನು ಬೆದರಿಸಲು ಸಾಧ್ಯವಿಲ್ಲ. ನೀವು ಚಿವುಟಿದಷ್ಟು ನಾವು ಚಿಗುರುತ್ತೇವೆ ಎಚ್ಚರಿಕೆ ನೀಡಿದ ಅವರು ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎಂದಿದ್ದಾರೆ.

Exit mobile version