
ಉಜಿರೆ: ಯೇಸು ಕ್ರಿಸ್ತರು ಶುಕ್ರವಾರ ಶಿಲುಬೆಗೆರಿದ ದಿನ ಶುಭ ಶುಕ್ರವಾರ, ಶನಿವಾರ ಯೇಸು ಕ್ರಿಸ್ತರ ಪುನಃರುತ್ತಾನಕ್ಕೆ ಸ್ವಾಗತಿಸುತ್ತ ದಿನವಾಗಿದ್ದು, ಸಂಜೆ ಚರ್ಚ್ ನಲ್ಲಿ ಹೊಸ ಬೆಂಕಿ, ಪಾಸ್ಕಾ ಹಬ್ಬದ ಮೇಣದ ಬತ್ತಿಯ ಮತ್ತು ಪವಿತ್ರ ನೀರಿನ ಆಶೀರ್ವಾದ ಏ. 19ರಂದು ನಡೆಯಿತು.
ದಯಾಳ್ ಭಾಗ್ ಆಶ್ರಮದ ಸುಪೀರಿಯರ್ ವಂ. ಫಾ. ಪೆಡ್ರಿಕ್ಸ್ ಬ್ರಯಗ್ಸ್ ಹಬ್ಬದ ಸಂದೇಶ ನೀಡಿ ಯೇಸು ಕ್ರಿಸ್ತರು ಪುನಃರುತ್ತಾನ ಹೊಂದಿದ್ದಾರೆ. ಅವರು ಇನ್ನು ಯಾವತ್ತೂ ಮರಣ ಹೊಂದುವುದಿಲ್ಲ. ಅವರು ನಮಗಾಗಿ ಶಿಲುಬೆಯಲ್ಲಿ ಮರಣ ಹೊಂದಿ ನಮಗಾಗಿ ಪುನಃರುತ್ತಾನ ಹೊಂದಿದ್ದಾರೆ. ಅವರ ಆಶೀರ್ವಾದದೊಂದಿಗೆ ಜೀವಿಸಬೇಕು.
ಇದು ನಿಜ ಸಂಗಾತಿ ನಾವು ನಂಬುತ್ತೇವೆ ಎಂದರು. ಚರ್ಚ್ ನ ಪ್ರಧಾನ ಧರ್ಮಗುರು ವಂ. ಫಾ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ವಂ. ಫಾ. ವಿಜಯ್ ಲೋಬೊ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆರ್ಥಿಕ ಸಮಿತಿ ಸದಸ್ಯರು, ಪಾಲನ ಮಂಡಳಿ ಸದಸ್ಯರು ಹಾಗೂ ಸಮಸ್ತ ಕ್ರೈಸ್ತ ಭಾಂದವರು ಭಾಗವಹಿಸಿ ಪುನಃರುತ್ತಾನಗೊಂಡ ಯೇಸು ಕ್ರಿಸ್ತರ ಆಶೀರ್ವಾದ ಪಡೆದರು.