
ಕುವೆಟ್ಟು: ಬಂಟರ ಯಾನೆ ನಾಡವರ ಸಂಘ (ರಿ ) ಬೆಳ್ತಂಗಡಿ, ಬಂಟರ ಯುವ ವಿಭಾಗ ಮತ್ತು ಬಂಟರ ಮಹಿಳಾ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಣೆಜಾಲ್ ಇಂಡೋರ್ ಲಯನ್ಸ್ ಕ್ರೀಡಾಂಗಣದಲ್ಲಿ ಬಂಟರ ಇಂಡೋರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು. ಉದ್ಘಾಟನೆಯನ್ನು ಲಯನ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಬಿ. ಜಯಂತ ಶೆಟ್ಟಿ ಭಂಡಾರಿಗುಡ್ಡೆ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಶೇಖರ್ ಶೆಟ್ಟಿ ಮನಸ್ವಿ ಪಣೆಜಾಲು, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕುಂಟಿನಿ , ಬೆಳ್ತಂಗಡಿ ಯುವ ಬಂಟ ವಿಭಾಗದ ಸಂಚಾಲಕ ಪುಷ್ಪರಾಜ್ ಶೆಟ್ಟಿ ಭಾಗವಹಿದ್ದರು.
ಬೆಳ್ತಂಗಡಿ ಬಂಟರ ಸಂಘ ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ಬಂಟರ ಯಾನೆ ನಾಡವರ ಮಾತೃ ಸಂಘ (ರಿ ) ಮಂಗಳೂರು ಸಂಚಾಲಕ ಜಯರಾಮ ಭಂಡಾರಿ ಧರ್ಮಸ್ಥಳ, ಬಂಟರ ಸಂಘದ ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನ, ಉಜಿರೆ ವಲಯ ಅಧ್ಯಕ್ಷ. ವನಿತಾ ವಿ. ಶೆಟ್ಟಿ , ಬೆಳ್ತಂಗಡಿ ಬಂಟರ ಸಂಘದ ನಿರ್ದೇಶಕ ಆನಂದ ಶೆಟ್ಟಿ ಐಸಿರಿ, ಬಂಟರ ಸಂಘದ ಕ್ರೀಡಾ ಸಂಚಾಲಕ ,ವೆಂಕಟ್ರಮಣ ಶೆಟ್ಟಿ ಉಜಿರೆ ಉಪಸ್ಥಿತರಿದ್ದರು.
ರಾಜು ಶೆಟ್ಟಿ ಬೆಂಗತ್ಯಾರ್ ಸ್ವಾಗತಿಸಿ,. ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು. ಕಿರಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಈ ಪಂದ್ಯಾಟದಲ್ಲಿ ತಾಲೂಕಿನ ಬಂಟ ಸಮಾಜದ 40 ತಂಡಗಳು ಭಾಗವಹಿಸಿದ್ದವು.