ವೇಣೂರು:ಎ.17: ಪೆರಾಡಿ ಎಂಬಲ್ಲಿ ಹಿಂದೂ ಸಂಪ್ರದಾಯದ ಪುರುಷ ಕಟ್ಟುವ ಕಾರ್ಯಕ್ರಮದ ಹೆಸರಿನಲ್ಲಿ ಮುಸ್ಲಿಮ್ ಸಮುದಾಯದ ಧಾರ್ಮಿಕ ನಂಬಿಕೆಗಳ ಬಗ್ಗೆ ಅವಹೇಳನಕಾರಿಯಾಗಿ ತೀವ್ರ ತುಚ್ಚ ರೀತಿಯಲ್ಲಿ ನಟನೆ ಮಾಡಿ ಹಾಗೂ ಪ್ರವಾದಿ ಮುಹಮ್ಮದ್ ಪೈಗಂಬರ್‌ರವರನ್ನು ಹೀಯಾಳಿಸಿ ವೀಡಿಯೋ ಚಿತ್ರೀಕರಿಸಿ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅವಮಾನ ಮಾಡಿರುವ ಘಟನೆ ಬಗ್ಗೆ ಪೋಲಿಸ್ ಇಲಾಖೆ ಕಾರ್ಯಕ್ರಮ ಆಯೋಜಕರ ಮತ್ತು ಪಾತ್ರಧಾರಿಗಳ ವಿರುದ್ಧ ದಾಖಲಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸುವಂತೆ ಮತ್ತು ಸಮಾಜದ ಸ್ವಾಸ್ಥ ಕೆಡಿಸಿ ಶಾಂತಿ ಭಂಗ ನಡೆಸಿ ಗಲಭೆ ಸೃಷ್ಠಿಸಲು ಪ್ರೇರಣೆ ಮಾಡುತ್ತಿರುವ ಇಂತಹವರ ಮೇಲೆ ಕಠಿಣ ಕಾನೂನು ಕ್ರಮವಹಿಸಲು ಬೆಳ್ತಂಗಡಿ ತಾಲೂಕು ಮುಸ್ಲಿಂ ಮುಖಂಡರ ನಿಯೋಗವು ವೇಣೂರು ಠಾಣಾ ಪೋಲಿಸ್ ಉಪ ನಿರೀಕ್ಷಕರನ್ನು ಬೇಟಿಯಾಗಿ ಒತ್ತಾಯಿಸಿದರು.
ನಿಯೋಗದಲ್ಲಿ ಬೆಳ್ತಂಗಡಿ ತಾಲೂಕು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಬಿ.ಎ.ನಝೀರ್ ಬೆಳ್ತಂಗಡಿ, ದ.ಕ.ಮತ್ತು ಉಡುಪಿ ಜಿಲ್ಲಾ ಜಮೀಯತುಲ್ ಫಲಾಹ್ ನ ಕಾರ್ಯದರ್ಶಿಯಾದ ಅಬ್ಬೋನು ಮದ್ದಡ್ಕ, ಬೆಳ್ತಂಗಡಿ ತಾಲೂಕು ಜಮೀಯತುಲ್ ಫಲಾಹ್ ಉಪಾದ್ಯಕ್ಷರಾದ ಖಾಲಿದ್ ಪುಲಾಬೆ, ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿಯ ನಾಮನಿರ್ದೇಶಿತ ಸದಸ್ಯರಾದ ಇಸ್ಮಾಯಿಲ್ ಪೆರಿಂಜೆ,ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರಾದ ಅಬ್ದುಲ್ ಕರೀಮ್ ಗೇರುಕಟ್ಟೆ,ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಯು.ಕೆ.ಮಹಮ್ಮದ್ ಹನೀಫ್ ಉಜಿರೆ,ಮತ್ತು ನಝೀರ್ ಬದ್ಯಾರ್, ಬೆಳ್ತಂಗಡಿ ತಾಲೂಕು ಜಮೀಯತುಲ್ ಫಲಾಹ್ ನ ಕಾರ್ಯದರ್ಶಿಯಾದ ಆಲಿಯಬ್ಬ ಪುಲಾಬೆ ಹಾಜರಿದ್ದರು.