ಪುಂಜಾಲಕಟ್ಟೆ: ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ರಿ. ಬೆಳ್ತಂಗಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ಮಹಿಳಾ ಸಂಘ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಎ.17ರಂದು ಶ್ರೀ ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವ ಸಮಾರಂಭವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪುಂಜಾಲಕಟ್ಟೆಯ ಶ್ರೀ ಗೋಪಾಲಕಷ್ಣ ದೇವಸ್ಥಾನದ ರಾಧಾಕೃಷ್ಣ ಸಭಾ ಭವನದಲ್ಲಿ ಪ್ರಭಾಕರ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಿತು.
ಮಂಗಳೂರಿನ ಪರಮತಾಳ ಭಜನಾ ತಂಡದ ಸುಜಾತಾ ಸಾಮಂತ್, ರಂಜಿತಾ ನಾಯಕ್, ಶ್ವೇತಾ ಕಾಮತ್, ಸಂಘದ ಸದಸ್ಯರು ಸುಮಧುರ ಹಾಗೂ ಭಕ್ತಿಪೂರ್ವಕ ಭಜನಾ ಸೇವೆಯನ್ನು ನಡೆಸಿಕೊಟ್ಟರು.
ಸಮಾಜದ ಸುಮಾರು 175 ಜನ ಜಾತಿ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಡೆದ ಸಭಾ ಕಾರ್ಯಕ್ರಮದಲ್ಲಿ ರಮೇಶ ನಾಯಕ್ ಮೈರ, ಗಣಪತಿ ಶೆಣೈ ಡೆಚ್ಚಾರು, ಮೋಹನ್ ಪ್ರಭು ಪೆರ್ಮರೋಡಿ, ಪೂರ್ಣಿಮಾ ನಾಯಕ್, ಮಾಲತಿ ಪ್ರಭು, ಕಸ್ತೂರಿ ನಾಯಕ್, ಪ್ರಭಾಕರ ಭಟ್ ಇಡ್ಯಾ ಉಪಸ್ಥಿತರಿದ್ದರು.
ಸುಧಾಕರ ಪ್ರಭು ಪೆರ್ಮರೋಡಿ ವರದಿ ವಾಚಿಸಿದರು. ಸಂಚಾಲಕ ದಯಾನಂದ ನಾಯಕ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಕ್ಕೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಭಾಕರ ಪ್ರಭು ಮುದಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪ್ರಭು ಗುಂಡಿದಡ್ಡ , ಕೋಶಾಧಿಕಾರಿಯಾಗಿ ಪ್ರದೀಪ್ ನಾಯಕ್ ಬಲ್ಕತ್ಯಾರು ಅವಿರೋಧವಾಗಿ ಆಯ್ಕೆಯಾದರು.
ಸಂಚಾಲಕ ದಯಾನಂದ ನಾಯಕ್ ಪೂಂಜಾಲಕಟ್ಟೆ, ಸುಧಾಕರ ಪ್ರಭು ಪೆರ್ಮರೋಡಿ ನೇತೃತ್ವ ವಹಿಸಿದ್ದರು.