Site icon Suddi Belthangady

ಪದ್ಮುಂಜ: ಅಂತರ ನಿವಾಸಿ ಹಾಮದ್ ನಿಧನ

ಪದ್ಮುಂಜ: ಅಂತರ ನಿವಾಸಿ ಕ್ರಷಿಕ ಹಾಮದ್ ಎ. 17ರಂದು ಸ್ವಗೃಹದಲ್ಲಿ ನಿಧನರಾದರು.

ಅನಾರೋಗ್ಯದ ನಿಮಿತ್ತ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ದಾಖಲಾಗಿದ್ದರು. ಆದರೂ ಇವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ಇವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಲಾಗಿತ್ತು. ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ನ ಯುವ ನಾಯಕ ರಕ್ಷಿತ್ ಶಿವರಾಂ ಸೇರಿದಂತೆ ನೂರಾರು ಮಂದಿ ಮ್ರತರ ಅಂತಿಮ ದರ್ಶನ ಪಡೆದರು.
ಇವರು ಪತ್ನಿ, ಮೂವರು ಗಂಡು, ಒಬ್ಬರು ಹೆಣ್ಣು ಮಗಳನ್ನು ಅಗಲಿದ್ದಾರೆ.

Exit mobile version