Site icon Suddi Belthangady

ಕಾನರ್ಪ ಓಬಯ್ಯ ಗೌಡರ ಮನೆಯಲ್ಲಿ ಪುರುಷರ ರಾಶಿ ಪೂಜೆ

ಕಡಿರುದ್ಯಾವರ: ಏ. 11ರಂದು ಆರಂಭಗೊಂಡ ಪುರುಷರ ವೇಷ, ಮನೆ ಮನೆ ತಿರುಗಾಟ ಏ. 15ರಂದು ಕೊನೆಗೊಂಡು
ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ ಕಾರ್ಯಕ್ರಮವು ಕಾನರ್ಪ ಓಬಯ್ಯ ಗೌಡರ ಮನೆಯಲ್ಲಿ ಜರಗಿತು.

ಪುರುಷರ ವೇಷಧಾರಿಗಳಾದ ಲೋಕಯ್ಯ ಗೌಡ ಜಾರಿಗೆದಡಿ, ನಾರಾಯಣ ಗೌಡ ಹಿಮಾರಡ್ಡ, ಕಿನ್ನಿ ಗೌಡ ಹೇರುಬಳ್ಳಿ, ಸುರೇಶ ಮಾಲ್ನ, ರಾಜೇಶ್ ಕೋಡಿ, ರವೀಂದ್ರ ಪೂಜಾರಿ ಕಾನರ್ಪ, ಜಿನ್ನಪ್ಪ ಗೌಡ ಕುದುರು, ಚೆನ್ನಕೇಶವ ಕಾನರ್ಪ, ಜನಾರ್ದನ ಗೌಡ ಕಾನರ್ಪ, ಸುದರ್ಶನ ಕಣಪ್ಪಾಡಿ, ಆನಂದ ಗೌಡ ಮುಳಿ ಹಿತ್ತಿಲು, ನಾಗೇಶ್ ಗೌಡ ಗುತ್ತು, ಹಾಗೂ ಊರಿನ ಹಿರಿಯರು ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪುರುಷರ ಸಮಿತಿಯಿಂದ ಮನೆ ಮನೆ ತಿರುಗಾಟದಲ್ಲಿ ಸಂಗ್ರಹವಾದ ಹಣದಲ್ಲಿ ಊರಿನಲ್ಲಿ ಯಾರಿಗಾದರೂ ಹುಷಾರಿಲ್ಲದ ಸಂಧರ್ಭದಲ್ಲಿ ಧನ ಸಹಾಯ, ಇನ್ನಿತರ ಅಗತ್ಯ ಸಹಾಯಗಳು ಹಾಗೆಯೇ ಸಮಿತಿಗೆ ಪಾತ್ರೆ ಇನ್ನಿತರ ವಸ್ತುಗಳನ್ನು ಖರೀದಿಸಿ ಊರಿನಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಮಿತ ದರದಲ್ಲಿ ನೀಡುವುದು ಇಲ್ಲಿಯ ವಾಡಿಕೆ ಎಂದು ಸಮಿತಿಯ ಸದಸ್ಯ ಸುರೇಶ ಕೌಡಂಗೆ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

Exit mobile version