ಉಜಿರೆ: ಪಾಸ್ಕಾ ಹಬ್ಬದ ಅಂಗವಾಗಿ ಯೇಸು ಕ್ರಿಸ್ತರ ಶಿಲುಬೆಗೆರಿದ ದಿನ ಶುಭ ಶುಕ್ರವಾರ ಶಿಲುಬೆಯ ಹಾದಿಯೊಂದಿಗೆ ಭಕ್ತಿಯಿಂದ ಎ. 18ರಂದು ಆಚರಿಸಲಾಯಿತು.
ಪರಸ್ಪರ ಪ್ರೀತಿ,ವಿಶ್ವಾಸ, ನಂಬಿಕೆ ಅತೀ ಮುಖ್ಯ. ಅವಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಜಪಾನ್ ದೇಶದಲ್ಲಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡು ದಯಾಳ್ ಭಾಗ್ ಆಶ್ರಮದಲ್ಲಿ ಸೇವೆ ಸಲ್ಲಿಸಲು ಆಗಮಿಸಿದ ಫಾ. ಅಜಿತ್ ಡಿಸೋಜಾ ಸಂದೇಶ ನೀಡಿ ಮಾತನಾಡಿದರು.
ಎಲ್ಲರನ್ನು ಗೌರವದಿಂದ ಕಾಣಬೇಕು. ಯೇಸು ಕ್ರಿಸ್ತರು ನಮಗಾಗಿ ಜೀವ ತೆತ್ತರು. ಸದಾ ನಾವು ಸಿಲುಬೆಯ ಹಾದಿಯಲ್ಲಿ ನಡೆದರೆ ನಾವು ದೇವರ ಮಕ್ಕಳಾಗಲು ಸಾಧ್ಯ ಎಂದು ಹೇಳಿದರು.
ಚರ್ಚ್ ಧರ್ಮಗುರು ಫಾ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಚರ್ಚ್ ಹಾಗೂ ಸಮಸ್ತ ಕ್ರೈಸ್ತ ಭಾಂದವರು ಭಾಗವಹಿಸಿ ಶಿಲುಬೆಗಿರಿದ ಯೇಸು ಕ್ರಿಸ್ತರ ಆಶೀರ್ವಾದ ಪಡೆದರು.