ಪೆರಾಡಿ: ಪೆರಾಡಿ ಮತ್ತು ಪೆರಿಂಜೆ ವಲಯದ ನವೋದಯ ಸ್ವ-ಸಹಾಯ ಗುಂಪುಗಳ ಮಹಿಳಾ ಸದಸ್ಯರುಗಳಿಗೆ ನವೋದಯ ಸಮವಸ್ತ್ರಗಳನ್ನು ಪೆರಾಡಿ ಬ್ಯಾಂಕಿನ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ನರವರು ವಿತರಿಸಿದರು. ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಪ್ರವೀಣ್ ಪಿಂಟೋ, ಸುರೇಶ್ ಅಂಚನ್, ವಿಜಯ ನಾಯ್ಕ, ಕೃಷ್ಣಪ್ಪ ಕಿರೋಡಿ, ಸುಜಾತ, ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹೇಮಾ ಎಸ್.ಪಿ., ಬೆಳ್ತಂಗಡಿ ನವೋದಯ ಸ್ವ-ಸಹಾಯ ಗುಂಪುಗಳ ಮೇಲ್ವಿಚಾರಕ ವಿನೋದ್, ಕಾರ್ಕಳ ನವೋದಯ ಮೇಲ್ವಿಚಾರಕ ನಾರಾಯಣ ಎಮ್. ಎಸ್., ಸದಾನಂದ ಪೂಜಾರಿ ದೋಲ್ದೊಟ್ಟು, ಪೆರಾಡಿ ವಲಯದ ನವೋದಯ ಪ್ರೇರಕಿ ನಳಿನಿ, ಬ್ಯಾಂಕಿನ ಸಿಬ್ಬಂದಿ ವರ್ಗ, ನವೋದಯ ಸ್ವ- ಸಹಾಯ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.
ಪೆರಿಂಜೆ ವಲಯದ ನವೋದಯ ಪ್ರೇರಕ ಸುಜಿತ್ ಕುಮಾರ್ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ನವೋದಯ ಮೇಲ್ವಿಚಾರಕ ವಿನೋದ್ ಸ್ವಾಗತಿಸಿದರು. ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹೇಮಾ ಎಸ್.ಪಿ. ವಂದಿಸಿದರು.