ಬಂದಾರು: ಬಟ್ಲಡ್ಕ ಜುಮಾ ಮಸೀದಿಯ ಆವರಣದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂ ಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಎ. 17ರಂದು ರಾತ್ರಿ ಬಟ್ಲಡ್ಕ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಂದಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಾಲಡ್ಕ ಜುಮಾ ಮಸೀದಿ ಖತೀಬ್ ಬಹು ಮುಹಮ್ಮದ್ ಮನ್ಸೂರ್ ಮುಈನಿ ಹಾಗೂ ಅದನಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಖತೀಬ್ ಬಹು ಮುಹಮ್ಮದ್ ಆರಿಫ್ ಮದನಿ ನೆರವೇರಿಸಿದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಜಮಾಅತ್ ಅದ್ಯಕ್ಷ ಅಬೂಬಕ್ಕರ್ ಬಟ್ಲಡ್ಕ ಉಪಸ್ಥಿತರಿದ್ದರು