Site icon Suddi Belthangady

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ರಿಕ್ಷಾ: ಚಾಲಕನಿಗೆ ಗಂಭೀರ ಗಾಯ

ಉಜಿರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಿರು ಸೇತುವೆ ನಿರ್ಮಾಣದ ಚರಂಡಿಗೆ ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ಬಿದ್ದಿರುವ ಘಟನೆ ಎ. 17ರಂದು ರಾತ್ರಿ ಉಜಿರೆಯ ಬೆನಕ ಆಸ್ಪತ್ರೆಯ ಸಮೀಪ ನಡೆದಿದೆ.

ಬೆಳ್ತಂಗಡಿಯಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ಆಟೋ ಚಾಲಕ ಬೆನಕ ಆಸ್ಪತ್ರೆಯ ಸಮೀಪದಲ್ಲಿರುವ ಕಿರು ಸೇತುವೆ ನಿರ್ಮಾಣದ ಚರಂಡಿಗೆ ಬಿದ್ದು ಚಾಲಕನಿಗೆ ಗಂಭೀರ ಗಾಯವಾಗಿದೆ. ರಿಕ್ಷಾ ಚಾಲಕ ಆದರ್ಶ ನಗರ ಬೆಳ್ತಂಗಡಿಯ ಅಬೂಬಕ್ಕರ್ ಎಂದು ತಿಳಿದುಬಂದಿದೆ. ತಕ್ಷಣ ಧನ್ವಿ ಆಂಬುಲೆನ್ಸ್ ಮಾಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚರಂಡಿಗೆ ಬಿದ್ದ ರಭಸಕ್ಕೆ ರಿಕ್ಷಾ ಸಂಪೂರ್ಣ ಹಾನಿಯಾಗಿದೆ.
ಘಟನಾ ಸ್ಥಳದಲ್ಲಿ ಸಾರ್ವಜನಿಕ ಜಮಾಯಿಸಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ.

Exit mobile version