ಬೆರ್ಕಳ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಬೆರ್ಕಳ ಇದರ ವತಿಯಿಂದ ಶ್ರೀ ಭಗವತಿ ಪ್ರಸಾದತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ನಡುವೆ ಕಲ್ಜಿಗದ ಸತ್ಯ ಯಕ್ಷಗಾನ ನಡೆಯಿತು. ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿ, ಗುಡ್ಡಪ್ಪ ಪಂಜ, ಹೆಬ್ರಿ ಗಣೇಶ್, ಧನಂಜಯ ಕೊಯ್ಲ, ಸುಂದರ ಬಂಗಾಡಿ, ಸಂತೋಷ, ಕುಲಶೇಖರ, ಪವನ್ ರಾಜ್ ಹೆಗ್ಡೆ ಧರ್ಮಸ್ಥಳ, ಆನಂದ ಪಡ್ರೆ, ಇವರನ್ನು ಬೇಬಿರೇಖಾ ಶೆಟ್ಟಿ ಅನಿಲಡೆ ಇವರ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಯಶೋಧರ ಶೆಟ್ಟಿ, ಮೇಳದ ವ್ಯವಸ್ಥಾಪಕ ರಾಜೇಶ್ ಪೂಜಾರಿ, ಬೆರ್ಕಳ ಅಧ್ಯಕ್ಷ ಸುಂದರ, ಕಾರ್ಯದರ್ಶಿ ವಿಘ್ನೇಶ್ ಆಚಾರ್ಯ ಉಪಸ್ಥಿತರಿದ್ದರು. ದೇವದಾಸ್ ಪೂಜಾರಿ ಕಜೆಕಾರು ಕಾರ್ಯಕ್ರಮ ನಿರೂಪಿಸಿದರು.