ಬಳಂಜ: ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲೇ ಹೆಮ್ಮೆಯ ಕುಣಿತ ಭಜನಾ ಮಂಡಳಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಬೆಂಗಳೂರಿಗೆ 3 ದಿನಗಳ ಅಧ್ಯಯನ ಪ್ರವಾಸಕ್ಕೆ ಹೊರಟಿದ್ದು, ಏ. 15ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಮಂಡಳಿಯ ಸದಸ್ಯರಿಗೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಲಲಿತ ಹಾಗೂ ಅವರ ಪುತ್ರ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಬಿ. ಅಮೀನ್ ಅವರು ಮಾಡಿಸಿಕೊಟ್ಟ ಐಡಿ ಕಾರ್ಡ್ ವಿತರಣೆ ಹಾಗೂ ಉದ್ಯಮಿ ಬಳಂಜದ ಅಶ್ರಫ್ ಅವರು ಉಚಿತವಾಗಿ ನೀಡಿದ ಜೆರ್ಸಿ ವಿತರಣೆ ಕಾರ್ಯಕ್ರಮವು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಪ್ರವಾಸ ಹೊರಟಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಬಳಂಜ, ರವೀಂದ್ರ ಬಿ. ಅಮೀನ್, ಉದ್ಯಮಿ ಅಶ್ರಫ್ ಬಳಂಜ, ದಿನೇಶ್ ಕುದ್ರೋಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು.
ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಒಟ್ಟು 40 ಮಂದಿ ಸದಸ್ಯರು ಹಾಗೂ ಪೋಷಕರು ಅಧ್ಯಯನ ಪ್ರವಾಸ ಹೊರಟಿದ್ದು ಬೆಂಗಳೂರು ಸೋಲುರು ಮಠ, ವಿಧಾನ ಸೌಧ, ಹೈಕೋರ್ಟ್ ವೀಕ್ಷಣೆ, ಇಸ್ಕಾನ್ ಮಂದಿರ, ಚಿಕ್ಕಬಳ್ಳಾಪುರ ಈಶ ಅಧಿಯೋಗಿ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಲಾಗುತ್ತಿದೆ. ಎಂದು ಪ್ರವಾಸದ ಉಸ್ತುವಾರಿ ವಹಿಸಿರುವ ಹರೀಶ್ ವೈ ಚಂದ್ರಮ ತಿಳಿಸಿದ್ದಾರೆ. ಮಂಡಳಿಯ ಅಧ್ಯಕ್ಷ ಜ್ಯೋತಿ ಧನ್ಯವಾದ ಸಲ್ಲಿಸಿದರು.