ಬೆಳ್ತಂಗಡಿ: ಬೈಕ್ ಹಾಗೂ ರಿಕ್ಷಾ ನಡುವೆ ರಸ್ತೆ ಅಪಘಾತ ಸಂಭವಿಸಿದ ಘಟನೆ ಉಜಿರೆಯ ಇಂಡಿಯನ್ ಪೆಟ್ರೋಲ್ ಪಂಪ್ ಹತ್ತಿರ ಎ.16ರಂದು ನಡೆದಿದೆ. ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಜಿರೆಯಿಂದ ಚಾರ್ಮಾಡಿ ಕಡೆಗೆ ಪ್ರಯಾಣಿಸುತ್ತಿದ್ದ ರಿಕ್ಷಾ ಹಾಗೂ ಅನುಗ್ರಹದಿಂದ ಉಜಿರೆಗೆ ಪ್ರಯಾಣಿಸುತ್ತಿದ್ದ ಬೈಕ್ ನಡುವೆ ಅಪಘಾತ ಸಂಬಂಧಿಸಿದೆ.
ರಿಕ್ಷಾ ಸವಾರ ಪೆಟ್ರೋಲ್ ಪಂಪ್ ಕಡೆಗೆ ತಿರುಗಿಸುವ ವೇಳೆ ಎದುರಿನಿಂದ ಬಂದ ಬೈಕ್ ರಿಕ್ಷಾದ ಮುಂಭಾಗದ ಚಕ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಹಾನಿಯಾಗಿದ್ದು ಬೈಕ್ ಮತ್ತು ರಿಕ್ಷಾ ಸವಾರನಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಉಜಿರೆ ನಿವಾಸಿ ತನುಷ್ ಶೆಟ್ಟಿ ಮತ್ತು ಹಾಸನ ಮೂಲದವರ ರಿಕ್ಷಾ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ