Site icon Suddi Belthangady

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ – ಚಪ್ಪರ ಮಹೂರ್ತ

ಬೆಳ್ತಂಗಡಿ: ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಏ. 20ರಂದು ಕೆ.ಪಿ.ಸಿ.ಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ತಾತ್ಕಾಲಿಕ ಚಪ್ಪರಕ್ಕೆ ಮಹೂರ್ತ ನೆರವೇರಿಸಲಾಯಿತು.

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರ್ಚಕ ಅನಂತ ಇರುವತ್ರಾಯ ಅವರು ಪೂಜಾ ವಿಧಿ–ವಿಧಾನ ನೆರವೇರಿಸಿದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕೆ. ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶೇಖರ ಕುಕ್ಕೆಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರ ಗೋಪಿನಾಥ್ ನಾಯಕ್ ಕುವೆಟ್ಟು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಓಡಿಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆ ಮಾರ್, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಬಿ. ಕಳಿಯ ಪಕ್ಷದ ಪ್ರಮುಖರಾದ ಪ್ರವೀಣ್ ಹಳ್ಳಿ ಮನೆ, ಅಬ್ದುಲ್ ಸಲಾಂ ಮರೋಡಿ, ನಾರಾಯಣ ಗೌಡ ದೇವಸ್ಯ, ಮಹಮ್ಮದ್ ಹನೀಫ್ ಉಜಿರೆ, ವೀರೇಂದ್ರ ಕುಮಾರ್ ಜೈನ್ ನಾವಾರ, ರವೀಂದ್ರ ಅಮೀನ್ ಬಳೆಂಜ, ಧನಂಜಯ್ ರಾವ್, ನವೀನ ಗೌಡ ಸವಣಾಲು, ಅಜರ್ ನಾವೂರು, ಅರುಣ್ ಲೋಬೋ, ದೇವಿಪ್ರಸಾದ್ ಶೆಟ್ಟಿ ಅಳದಂಗಡಿ, ಸಚಿನ್ ಕುಮಾರ್ ನೂಜೋಡಿ, ರಜತ್ ಗೌಡ ಉಜಿರೆ, ಮಹಮ್ಮದ್ ಶರೀಫ್ ಸಬರಬೈಲು, ಉಮೇರಾ ಬಾನು, ಸದಾನಂದ ನಾಲ್ಕುರು, ವಿನಯ್ ಸೋಣಂದೂರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version