Site icon Suddi Belthangady

ಗುರುವಾಯನಕೆರೆ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

ಬೆಳ್ತಂಗಡಿ: ಉಜಿರೆ ಉಪವಿಭಾಗದ ವ್ಯಾಪ್ತಿಯಲ್ಲಿ ಏ. 19ರಂದು 110/33/11ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಕಕ್ಕಿಂಜೆ 33/11ಕೆವಿ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33ಕೆವಿ ಕಕ್ಕಿಂಜೆ ಹಾಗೂ 33ಕೆವಿ ಪಿಲೆಗಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ವಿದ್ಯುತ್ ವ್ಯತ್ಯಯ ಆಗುವುದರಿಂದ ಈ ಕೆಳಗೆ ನಮೂದಿಸಿದ 11ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ಕೋರಲಾಗಿದೆ.

ಸಮಯ 10ರಿಂದ 5ರವರೆಗೆ, ಫೀಡರ್: ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು, 33ಕೆವಿ ಪೆಟ್ರೋನೆಟ್ ಸ್ಥಾವರ, 33ಕವಿ HPCL ಸ್ಥಾವರ.

ಪಿಲಿಕ್ಕಳ: ತೋಟತ್ತಾಡಿ, ಚಿಬಿದ್ರೆ, ನೆರಿಯ

ಚಾರ್ಮಾಡಿ: ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ

ಮುಂಡಾಜೆ: ಮುಂಡಾಜೆ, ಕಲ್ಮಂಜ

ದಿಡುಪೆ: ದಿಡುಪೆ, ಕೊಲ್ಲಿ.

Exit mobile version