Site icon Suddi Belthangady

ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೇಸಿಗೆ ಶಿಬಿರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜ್ ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ 9 ದಿನದ ಬೇಸಿಗೆ ಶಿಬಿರವನ್ನು ಎ. 15ರಿಂದ ಆಯೋಜಿಸಿದ್ದು, ಉದ್ಘಾಟನೆಯನ್ನು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಎಸ್. ಎನ್. ಕಾಕತ್ಕರ್ ನೆರವೇರಿಸಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ, ವಿದ್ಯಾರ್ಥಿಯು ಪಠ್ಯ-ಪೂರಕ ಕಲಿಯುವಿಕೆಯಿಂದ ಪೂರ್ಣನಾಗುತ್ತಾನೆ. ಪಠ್ಯೇತರ ಚಟುವಟಿಕೆಗಳು ಮತ್ತು ಕೌಶಲ್ಯಾಭಿವೃದ್ಧಿಯಿಂದಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಿ ಪರಿಪೂರ್ಣನಾಗುತ್ತಾನೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು.

ಈ ಶಿಬಿರದಲ್ಲಿ ಕಂಪ್ಯೂಟರ್ ಅಸೆಂಬ್ಲಿಂಗ್, ಇಲೆಕ್ಟ್ರಾನಿಕ್ಸ್, ಸೌರಶಕ್ತಿ ಉತ್ಪಾದನೆ, ಮುಂತಾದ ತಂತ್ರಜ್ಞಾನ ವಿಷಯಗಳೊಂದಿಗೆ ಬೌದ್ಧಿಕ ಮತ್ತು ಕೌಶಲ್ಯಾಭಿವೃದ್ಧಿ ವಿಷಯಗಳು, ಐಡಿಯಾ ಜನರೇಶನ್, ಪ್ರಾಜೆಕ್ಟ್ ತಯಾರಿ, ಕಾರ್ಯಕ್ರಮ ನಿರ್ವಹಣೆ, ಕ್ರೀಡೆ, ಯೋಗ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು ಎಂದು ಪ್ರಾಚಾರ್ಯ ಡಾ. ಅಶೋಕ್ ಕುಮಾರ್ ತಿಳಿಸಿದರು. ಇಲೆಕ್ಟ್ರಾನಿಕ್‌ ವಿಭಾಗದ ಸಹ ಪ್ರಾದ್ಯಾಪಕ ರಾಧಾಕೃಷ್ಣ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಮಹೇಶ್‌ ವಂದಿಸಿದರು.

Exit mobile version