Site icon Suddi Belthangady

ನಾಗಸ್ವರ ವಾದಕ ಸತೀಶ್‌ ಪೂಜಾರಿಗೆ ಅಳದಂಗಡಿ ಅರಸರಿಂದ ಗೌರವ

ಕೊಕ್ರಾಡಿ: ಗ್ರಾಮದ ಕೊಡಂಗೆಗುತ್ತು ಮನೆಯಲ್ಲಿ ಇದೇ ಏ. 13ರಂದು ನಡೆದ ಅಣ್ಣಪ್ಪ ಪಂಜುರ್ಲಿ ದೈವ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವದ ಸುಸಂದರ್ಭದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್‌ ಅಜಿಲ ಅವರು ನಾಗಸ್ವರ ವಾದಕ ಸತೀಶ್‌ ಪೂಜಾರಿ ಅವರನ್ನು ಪದಕದೊಂದಿಗೆ ಗೌರವಿಸಿದರು.

ಕೊಡಂಗೆಗುತ್ತು ಮನೆ ಗಡಿಪ್ರಧಾನರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಳದಂಗಡಿ ಅರಮನೆಯ ಚಾವಡಿ ನಾಯಕರಾದ ರಾಜಶೇಖರ್‌ ಶೆಟ್ಟಿ ಮತ್ತಿತರರು ಇದ್ದರು.

ಖ್ಯಾತ ನಾಗಸ್ವರ ವಾದಕರಾಗಿದ್ದ ದಿ. ಅಣ್ಣಿ ಪೂಜಾರಿ ಅವರ ಪುತ್ರ ಸತೀಶ್‌ ಪೂಜಾರಿ ಅವರು 25ಕ್ಕೂ ಅಧಿಕ ವರ್ಷಗಳಿಂದ ನಾಗಸ್ವರ ನುಡಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಕೊಕ್ರಾಡಿ ಬೆಸ್ಟ್ ಫ್ರೆಂಡ್ಸ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

Exit mobile version