ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಹಾಗೂ ವಾಣಿ ವಿದ್ಯಾ ಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾಭವನದ ಲೋಕಾರ್ಪಣ ಸಮಾರಂಭದ ಪೂರ್ವ ತಯಾರಿ
ಸಭೆಯ ಪ್ರಯುಕ್ತ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಗ್ರಾಮ ಸಮಿತಿ ಮಲವಂತಿಗೆ – ಮಿತ್ತಬಾಗಿಲು ಇಲ್ಲಿ ಸಭೆ ನಡೆಸಲಾಯಿತು.
ತಾಲೂಕು ನಿರ್ದೇಶಕ ಡಿ.ಎಮ್. ಗೌಡ ಹಾಗೂ ಗ್ರಾಮ ಸಮಿತಿ ಅಧ್ಯಕ್ಷ ಆನಂದ ಗೌಡ ಮೈರ್ನೋಡಿ ಹಾಗೂ ತಾಲೂಕು ಯುವ ವೇದಿಕೆ ಕಾರ್ಯದರ್ಶಿ ತೀಕ್ಷಿತ್ ಕೆ. ಕಲ್ಬೆಟ್ಟು,
ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮ್ಯಾನೇಜರ್ ಉಮೇಶ್ ಗೌಡ ಮೈರ್ನೋಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.