ಕುವೆಟ್ಟು: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯತ್ ಕುವೆಟ್ಟು, ನರೇಗಾ ಮತ್ತು ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಮಂಜೂರಾದ ಬಾಲಕ ಬಾಲಕಿಯರ ನೂತನ ಶೌಚಾಲಯ ಹಸ್ತಾಂತರ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ. ಪಂ. ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಗ್ರಾ. ಪಂ. ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಸಿಲ್ವೆಸ್ಟರ್ ಮೋನಿಸ್, ಅಮೀನಾ, ಶಾಲಾ ಎಸ್. ಡಿ. ಎಮ್. ಸಿ ಅಧ್ಯಕ್ಷ ಸಿರಾಜ್ ಎಂ. ಚಿಲಿಂಬಿ, ಉಪಾಧ್ಯಕ್ಷೆ ಲಾವಣ್ಯ ಶೆಟ್ಟಿ ಅರ್ಕಜೆ, ಶಿಕ್ಷಣ ಸಂಯೋಜಕ ಚೇತನಾಕ್ಷಿ, ಮುಖ್ಯ ಶಿಕ್ಷಕ ಭಾಸ್ಕರ್, ಎಸ್. ಡಿ. ಎಂ. ಸಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಧವಲಾ ಎ. ನಿರೂಪಿಸಿ, ಶಿಕ್ಷಕಿ ಕನ್ಸೆಪ್ಟ ಪಿಂಟೊ ವಂದಿಸಿದರು.