Site icon Suddi Belthangady

ಗುರುವಾಯನಕೆರೆ: ಕಾವ್ಯಶ್ರೀ ಆಜೇರುರವರ “ಮಲೆನಾಡ ಮಡಿಲಿನಲ್ಲಿ” ಜಿನಭಕ್ತಿಗೀತೆ ಬಿಡುಗಡೆ

ಗುರುವಾಯನಕೆರೆ: ಭಗವಾನ್ ಶ್ರೀ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಕಾರ್ಮಣ್ಣು ಸಂಸ್ಥೆಯ ಪಂಚಕಲ್ಯಾಣದ ಪ್ರಯುಕ್ತ ಕಾರ್ಮಣ್ಣು ಕುಟುಂಬದವರ ಪ್ರಾಯೋಜಕತ್ಚದಲ್ಲಿ ನಿರ್ಮಾಣಗೊಂಡ ಕಾವ್ಯಶ್ರೀ ಆಜೇರು ಇವರು ಹಾಡಿರುವ “ಮಲೆನಾಡ ಮಡಿಲಿನಲ್ಲಿ. . .” ಎಂಬ ಜಿನಭಕ್ತಿಗೀತೆಯನ್ನು ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ಚೇರ್ಮನ್ ಸುಮಂತ್ ಜೈನ್ ಇವರ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.

ಸುಮಂತ್, ಶ್ವೇತಾ ಹಾಗೂ ಮಲ್ಲಿನಾಥ ಜೈನ್ ಇವರನ್ನು ಗೌರವಿಸಲಾಯಿತು. ಶ್ವೇತಾ ದಿಲೀಪ್ ಇವರ ಸಾಹಿತ್ಯಕ್ಕೆ, ಹಿಮ್ಮೇಳದಲ್ಲಿ, ಮದ್ದಳೆಯಲ್ಲಿ ಜನಾರ್ಧನ ತೋಳ್ಪಾಡಿತ್ತಾಯ, ಚೆಂಡೆಯಲ್ಲಿ ಚಂದ್ರಶೇಖರ, ರೆಕಾರ್ಡಿಂಗ್ ನಲ್ಲಿ ಸೌಂಡ್ ಟ್ರಾಕ್ ಕಲ್ಲಡ್ಕ ಇವರು ಸಹಕರಿಸಿದರು. ಬಿ. ಭುಜಬಲಿ ಧರ್ಮಸ್ಥಳ ಕಾರ್ಯಕ್ರಮವನ್ನು ಹಾಗೂ ಹಾಡುಗಳನ್ನು ಸಂಯೋಜಿಸಿದರು. ಮಲ್ಲಿನಾಥ್ ಜೈನ್, ಧರ್ಮರಾಜ್ ಧರ್ಮಸ್ಥಳ, ಎಕ್ಸೆಲ್ ನ ಶಾಂತಿನಾಥ್ ಜೈನ್ ಪ್ರಾಚಾರ್ಯರು, ವಿದ್ಯಾ ರ್ಥಿನಿಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮಲ್ಲಿನಾಥ್ ಜೈನ್ ಕಾರ್ಯಕ್ರಮ ನಿರೂಪಿಸಿದರ. ಪ್ರಕಾಶ್ ಸಹಕರಿಸಿದರು.

Exit mobile version