Site icon Suddi Belthangady

ಏ. 16: ನಾಲ್ಕೂರಿನಲ್ಲಿ ಭಜನಾ ಕಮ್ಮಟೋತ್ಸವ ಹಾಗೂ ಯಕ್ಷಪ್ರಿಯ ಸಮಿತಿಯಿಂದ ಯಕ್ಷಗಾನ ಬಯಲಾಟ

ಬಳಂಜ: ಯಕ್ಷಪ್ರಿಯ ಸಮಿತಿ ಮತ್ತು ಪಂಚಶ್ರೀ ಮಕ್ಕಳ ಕುಣಿತ ಭಜನಾ ಮಂಡಳಿ ನಾಲ್ಕೂರು, ಬಳಂಜ ಹಾಗೂ ದಾನಿಗಳ ಸಹಕಾರದೊಂದಿಗೆ 2ನೇ ವರ್ಷದ ಯಕ್ಷಗಾನ ಬಯಲಾಟ ಹಾಗೂ ಭಜನಾ ಕಮ್ಮಟೋತ್ಸವವು ಏ. 16ರಂದು ನಾಲ್ಕೂರು ಗ್ರಾಮದ ನಿಟ್ಟಡ್ಕ ಮೈದಾನದಲ್ಲಿ ನಡೆಯಲಿದೆ. ಸಂಜೆ 3ಗಂಟೆಗೆ ಬಳಂಜ ದೇವಸ್ಥಾನದಿಂದ ವಿವಿಧ ಭಜನಾ ಮಂಡಳಿಯ ಸದಸ್ಯರ ಕೂಡುವಿಕೆಯಲ್ಲಿ ಶ್ರೀ ಭಗವತಿ ಯಕ್ಷಗಾನ ಮೇಳದ ದೇವರ ಮೆರವಣಿಗೆ ನಡೆಯಲಿದ್ದು, ನಂತರ ತಾಲೂಕಿನ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಮ್ಮಟ, ಧಾರ್ಮಿಕ ಸಭೆ, ಸಸಿಹಿತ್ಲು ಮೇಳದವರಿಂದ ಯಕ್ಷಗಾನ ಬಯಲಾಟ, ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯ ಉಸ್ತುವಾರಿ ವಹಿಸಿರುವ ಸಮಾಜ ಸೇವಕರಾದ ಸುನೀಲ್ ಶೆಟ್ಟಿ ನಾಲ್ಕೂರು ಹಾಗೂ ಸಂಜೀವ ಶೆಟ್ಟಿ ಖಂಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ವಿಗಾಗಿ ದುಡಿಯುತ್ತಿದ್ದಾರೆ.

Exit mobile version