Site icon Suddi Belthangady

ಮಡವು ನಿವಾಸಿ ಹರ್ಷನಾರಾಯಣ ಮೂರ್ತಿ ನಿಧನ

ಪಾಂಡವರಕಲ್ಲು: ಬಡಗಕಜೆಕಾರು ಗ್ರಾಮದ ಮಡವು ನಿವಾಸಿ ಹರ್ಷನಾರಾಯಣ ಮೂರ್ತಿ (74ವರ್ಷ) ಎ. 13ರಂದು ನಿಧನರಾಗಿದ್ದಾರೆ. ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿದ್ದು, ಉತ್ತಮ ವಾಗ್ಮಿಗಳೂ, ತಾಳಮದ್ದಳೆ ಅರ್ಥಧಾರಿಗಳೂ, ಪ್ರವಚನಕಾರರೂ ಆಗಿದ್ದರು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದರು.ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

ಪತ್ನಿ ಶಾಂತಾ, ಮಕ್ಕಳಾದ ಡಾ. ವಿಜಯಲಕ್ಷ್ಮೀ ಎಮ್., ಸಂಸ್ಕೃತ ಉಪನ್ಯಾಸಕಿ ಎಮ್.ಜಿ.ಎಮ್ ಕಾಲೇಜು ಉಡುಪಿ, ಶ್ರೀನಿವಾಸ ಮೂರ್ತಿ ಎಮ್. ಮುಖ್ಯ ವ್ಯವಸ್ಥಾಪಕ ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿ ಮಂಗಳೂರು, ಡಾ. ಸೂರ್ಯನಾರಾಯಣ ಎಮ್. ಚೇತನಾ ಕ್ಲಿನಿಕ್ ಹಳೇಪೇಟೆ ಉಜಿರೆ ಇವರನ್ನು ಅಗಲಿದ್ದಾರೆ.

Exit mobile version