Site icon Suddi Belthangady

ಕಾಯರ್ತಡ್ಕದಲ್ಲಿ ಶ್ರೀ ದುರ್ಗಾಂಬ ಎಂಟರ್ ಪ್ರೈಸಸ್ ಶುಭಾರಂಭ: ಏಷಿಯನ್ ಪೈಂಟ್ಸ್ ಸಹಿತ ಎಲ್ಲಾ ತರದ ಪೈಪ್ ಮತ್ತು ಫಿಟ್ಟಿಂಗ್ಸ್ ಗಳು ಲಭ್ಯ

ಕಾಯರ್ತಡ್ಕ: ಶ್ರೀ ದುರ್ಗಾoಬ ಎಂಟರ್ ಪ್ರೈಸಸ್ ಮಳಿಗೆಯು ಎ. 10ರಂದು ಶುಭಾರಂಭಗೊಂಡಿತು. ಶ್ರೀ ದುರ್ಗಾoಬ ಎಂಟರ್ ಪ್ರೈಸಸ್ ನಲ್ಲಿ ಎಲ್ಲಾ ಬಣ್ಣದ ಏಷಿಯನ್ ಪೈಂಟ್ ಗಳು ಬೇಕಾದ ರೀತಿಯಲ್ಲಿ ಮಿಶ್ರಣ ಮಾಡುವ ಮೆಷಿನರಿ ವ್ಯವಸ್ಥೆ ಇದ್ದು ಗಾರಹಕರು ಪೈಂಟ್ ಕೊಂಡುಕೊಳ್ಳಲು ಇನ್ನೂ ಮುಂದೆ ದೂರದ ಊರಿಗೆ ತೆರಳಬೇಕಾದ ಅನಿವಾರ್ಯತೆ ಇಲ್ಲ, ಹಾಗೆಯೇ ಈ ಮಳಿಗೆಯಲ್ಲಿ ಕೃಷಿ ನಿರಾವರಿಗೆ ಅಗತ್ಯ ಇರುವ ಪೈಪ್ ಮತ್ತು ಫಿಟ್ಟಿಂಗ್ಸ್ ಗಳು ಲಭ್ಯವಿದ್ದು ಕಾಯರ್ತಡ್ಕ ಎಂಬ ಅಭಿವೃದ್ಧಿ ಹೊಂದುತ್ತಿರುವ ಪೇಟೆಯಲ್ಲಿ ಈ ಎಲ್ಲಾ ವಸ್ತುಗಳು ಸಿಗುತ್ತಿರುವುದು ಗ್ರಾಹಕರಲ್ಲಿ ಸಂತಸ ಉಂಟು ಮಾಡಿದೆ.

ಶುಭಾರಂಭ ಸಮಾರಂಭಕ್ಕೆ ಉಮಾಮಹೇಶ್ವರ ದೇವಳದ ಅಧ್ಯಕ್ಷ ಆನಂದ ಗೌಡ, ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ ಹಾರಿತ್ತ ಕಜೆ, ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ ಕಳೆಂಜ, ಪಂಚಾಯತ್ ಸದಸ್ಯರಾದ ನಿತ್ಯಾನಂದ ರೈ ಶಿಬರಾಜೆ, ಹರೀಶ್ ಕೊಯ್ಲಾ, ವರ್ಧಮಾನ್ ಆಯಿಲ್ ಮಿಲ್ ಮಾಲಕ ಪರಪ್ಪು ಗುತ್ತು ಜಿತೇಂದ್ರ ಜೈನ್ ಆಗಮಿಸಿ ಶುಭಕೋರಿದರು. ಆಗಮಿಸಿದ ಅತಿಥಿಗಳನ್ನು ಸುಶಾಂತ್ ಹಾಗೂ ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.

Exit mobile version