ವೇಣೂರು: ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ ಕೊಪ್ಪದ ಬಾಕಿಮಾರು ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಸ೦ವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೆಡ್ಕರ್ ಜಯಂತಿ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಎ.14 ಕೇವಲ ಅ೦ಬೇಡ್ಕರ್ ಅವರ ಹುಟ್ಟು ಹಬ್ಬವಲ್ಲ ನಮ್ಮ೦ತ ಶೋಷಿತರ ದೀನ ದಲಿತರ ಹುಟ್ಟು ಹಬ್ಬ ಎಂದರು. ಟ್ರಸ್ಟ್ ನ ಹಿರಿಯರಾದ ಬಾಬು ಕಲ್ಯರಡ್ಡ ದೀಪ ಬೆಳಗಿಸಿದರು.
ಈ ವೇಳೆ ಸಮಿತಿಯ ಪ್ರಮುಖರಾದ ಧರ್ಮರಾಜ್ ಕೊಪ್ಪದ ಬಾಕಿಮಾರು, ಸುಧಾಕರ ಹೊಸ ಮನೆ, ಗಜೇಂದ್ರ ಪಾಲ್ದಡ್ಕ, ಶೀನ, ಶಶಿಧರ, ಪ್ರಶಾ೦ತ್, ಸುರೇಶ್ ಹೊಸಮನೆ, ಗೀತಾ ವಿಮಲ ಕರ್ಗಿ ಕೊಪ್ಪದ ಬಾಕಿಮಾರು ಉಪಸ್ಥಿತರಿದ್ದರು.