ಕೊಕ್ಕಡ: ಸಂತ ಜೋನರ ದೇವಾಲಯ ಕೌಕ್ರಾಡಿಯಲ್ಲಿ ಎ. 13ರಂದು “ಗರಿಗಳ ಭಾನುವಾರ” ಆಚರಣೆ ನಡೆಯಿತು.
ದಿನದ ಪ್ರಾರ್ಥನಾ ವಿಧಿ ಹಾಗೂ ಪವಿತ್ರ ಬಲಿ ಪೂಜೆಯನ್ನು ಸೇವಾದರ್ಶಿ ಮರ್ವಿನ್ ಪ್ರವೀಣ್ ಲೋಬೊರವರೊಂದಿಗೆ, ಪ್ರಧಾನ ಗುರುಗಳಾಗಿ ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ ರವರು ಅರ್ಪಿಸಿದರು.
ಭಕ್ತಾದಿಗಳು ಗರಿಗಳೊಂದಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಚರ್ಚಿಗೆ ಮೆರವಣಿಗೆಯಲ್ಲಿ ಸಾಗಿದರು. ಚರ್ಚ್ ಪರಿಪಾಲನ ಸಮಿತಿ ಉಪಾಧ್ಯಕ್ಷರು ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, ಆರು ವಾಳ್ಯದ ಗುರಿಕಾರರು ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಈ ಸಂಭ್ರಮದ ಆಚರಣೆಯಲ್ಲಿ ಪಾಲ್ಗೊಂಡರು.