ಬೆಳ್ತಂಗಡಿ: ಕ್ರೈಸ್ತ ಜಗತ್ತು ಪ್ರಪಂಚದಾದ್ಯಂತ ಅತಿ ವಿಶಿಷ್ಟ ರೀತಿಯಲ್ಲಿ ಯೇಸು ಕ್ರಿಸ್ತರ ಅಧಿಕೃತ ಜರುಸಲೆಮ್ ಪ್ರವೇಶ ಸಾರುತ್ತ ಶುಭ ಶುಕ್ರವಾರದ ಸಿದ್ಧತೆಗಾಗಿ ಜರುಸಲೆಮ್ ಪಟ್ಟಣ ಪ್ರವೇಶ ಮಾಡಿದ ಸವಿ ನೆನಪಿನೊಂದಿಗೆ ತೆಂಗಿನ ಗರಿಗಳಿಂದ ಅಲಂಕೃತವಾದ ಚರ್ಚ್ ಗಳಲ್ಲಿ ವಿಶೇಷ ಪೂಜೆ ಮತ್ತು ಗರಿಗಳ ಮೆರವಣಿಗೆಯೊಂದಿಗೆ ವಿಭಿನ್ನವಾಗಿ ಆಚರಿಸಲಾಯಿತು.
ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪ್ರೊಕ್ಯೂ ರೇಟರ್ ಫಾ. ಅಬ್ರಹಾಂ ಪಟ್ಟೇರಿ ನೇತೃತ್ವವನ್ನು ವಹಿಸಿದ್ದರು.
ಚರ್ಚ್ ನ ಧರ್ಮ ಗುರುಗಳಾದ ಫಾ.ಶಾಜಿ ಮಾತ್ಯು ಕೊಕ್ಕಡ ಎಸ್. ಎಫ್. ಎಸ್ ಶಾಲೆಯ ಅರುಣ್ ಪೂಜಾ ವಿಧಿಗಳಲ್ಲಿ ಭಾಗವಹಿಸಿದ್ದರು.