ಕೊಕ್ಕಡ : ರಜಾ ದಿನಗಳಲ್ಲಿ ಶಿಬಿರದ ಮೂಲಕ ನೀಡುವ ಶಿಕ್ಷಣ ಎಲ್ಲಾ ಮಕ್ಕಳಿಗೂ ಪ್ರಯೋಜನವಾಗಬೇಕು. ಕಲಿತ ಜ್ಞಾನವನ್ನು ಅಥವಾ ಶಿಕ್ಷಣವನ್ನು ಶಿಬಿರಾರ್ಥಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಲ್ವಾ ಶಿಬಿರ ನಡೆಸಿದ ಸಾರ್ಥಕತೆ ಸಿಗುತ್ತದೆ ಎಂದು ಕೊಕ್ಕಡ ವಿಶ್ವ ಹಿಂದೂ ಪರಿಷದ್ ನ ಅಧ್ಯಕ್ಷ ಪುರುಷೋತ್ತಮ ಕೊಕ್ಕಡ ನುಡಿದರು.
ಎ.13ರಂದು ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ 5ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಇದರ ಸಹಾಯಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ 4ನೇ ದಿನದ ಸಭಾ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಕೊಕ್ಕಡದ ಮಹಾವೀರ ಕಾಲೋನಿಯ ಸತ್ಯ ಸಾರಮಣಿ ದೈವಸ್ಥಾನದ ಅಧ್ಯಕ್ಷ ಗಿರೀಶ್ ಉದ್ಘಾಟಿಸಿದರು. 4ನೇ ದಿನ 109 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಶಿಬಿರದ ಮೊದಲನೆಯ ಅವಧಿಯಲ್ಲಿ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಉಜಿರೆ ಇಲ್ಲಿನ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಯೋಗಭ್ಯಾಸವನ್ನು ನಡೆಸಿಕೊಟ್ಟರು.
ಎರಡನೇಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವೀರ ಮರಾಠರು ಎನ್ನುವ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸೇವಕ ಸುರೇಶ್ ಪರ್ಕಳ ಮಾಹಿತಿ ನೀಡಿದರು.
ಮೂರನೇ ಅವಧಿಯಲ್ಲಿ ನಾಗರಿಕ ಪ್ರಜ್ಞೆ – ನಡವಳಿಕೆ ಶಿಕ್ಷಣದಲ್ಲಿ ಸ್ವಯಂ ಸೇವಾ ಸಂಘದ ಸೇವಕ ಸುದರ್ಶನ ಕನ್ಯಾಡಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.
ನಾಲ್ಕನೇ ಅವಧಿಯಲ್ಲಿ ಶ್ರೀರಾಮ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಂಜೆ ವಿದ್ಯಾರ್ಥಿಗಳಿಗೆ ದೇಶಿಯ ಆಟಗಳನ್ನು ಆಡಿಸಲಾಯಿತು. ವಿದ್ಯಾರ್ಥಿಗಳ ಸರಸ್ವತಿ ವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ವಾತಿ ಕೆ. ವಿ. ಸ್ವಾಗತಿಸಿ, ದಿವ್ಯ ಎ. ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು. ಏ. 14ರವರೆಗೆ ಶಿಬಿರ ನಡೆಯಲಿದೆ. ಗ್ರೀಷ್ಮ ಎಂ. ವಿ ವಂದಿಸಿದರು.