Site icon Suddi Belthangady

ಶಿಬಾಜೆ ಗ್ರಾಮದ ಪೆರ್ಲ ತಿಮ್ಮಪ್ಪ ಗೌಡರ ಚಿಕಿತ್ಸೆಗೆ ಸ್ಪಂದನಾ ಸೇವಾ ಸಂಘದಿಂದ ನೆರವು: ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ

ಶಿಬಾಜೆ: ಗ್ರಾಮದ ಪೆರ್ಲ ನಿವಾಸಿ ಭೂತದ ಚಾಕ್ರಿ (ಪೂಜಾರಿ)ನಿರ್ವಹಿಸುತ್ತಿದ್ದ ತಿಮ್ಮಪ್ಪ ಗೌಡ ರವರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು ಉಜಿರೆ ಎಸ್. ಡಿ. ಎಂ ಆಸ್ಪತ್ರೆ ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ತಿಂಗಳುಗಳಿಂದ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿ ವಿಶ್ರಾಂತಿಯಲ್ಲಿರುವ ಇವರ ಮುಂದಿನ ಇನ್ನೂ ಹೆಚ್ಚಿನ ಚಿಕಿತ್ಸೆಗೆಂದು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಂಗ ಸಂಸ್ಥೆಯಾದ ಸ್ಪಂದನಾ ಸೇವಾ ಸಂಘದ ವತಿಯಿಂದ ನೆರವು ನೀಡಲಾಯಿತು.

ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ ಮಾಡಲಾಯಿತು.

ವಾಣಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ತಾಲೂಕು ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಸುರೇಶ್ ಕೌಡಂಗೆ, ಸೀತಾರಾಮ್ ಬೆಳಾಲು, ವಾಣಿ ಕೋ ಓಪರೆಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಧನಂಜಯ ಗೌಡ ಪೆರ್ಲ, ಶಿಬಾಜೆ ಗ್ರಾಮ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ಅಧ್ಯಕ್ಷ ಅಣ್ಣು ಗೌಡ ಸದಸ್ಯರಾದ ವಿನಯ ಚಂದ್ರ ಟಿ., ವೆಂಕಪ್ಪ ಗೌಡ, ನಾರಾಯಣ ಗೌಡ ಹೊಸಹೊಕ್ಲು, ಸುದ್ದಿ ಬಿಡುಗಡೆ ವರದಿಗಾರ ರೂಪೇಶ್ ಗೌಡ ಶಿಬಾಜೆ ಉಪಸ್ಥಿತರಿದ್ದರು.

Exit mobile version