Site icon Suddi Belthangady

ಕೊಯ್ಯೂರು ಕೂಲಿ ಕಾರ್ಮಿಕನ ಮೇಲೆ ಹಲ್ಲೆ: ಆರೋಪಿ ಪೊಲೀಸ್ ವಶಕ್ಕೆ

ಕೊಯ್ಯೂರು: ಗ್ರಾಮದ ಆದೂರ್ ಪೆರಾಲ್ ಎಂಬಲ್ಲಿ ಕೂಲಿ ಕೆಲಸ ಮಾಡಲು ಬಂದವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿ ಉಜ್ವಲ್ ಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಕೊಯ್ಯೂರಿನ ಆದೂರ್ ಪೆರಾಲ್ ಎಂಬಲ್ಲಿಗೆ ಬೇಲಿಯ ಕೆಲಸಕ್ಕೆಂದು ಸ್ಥಳೀಯ ಆರು ಮಂದಿ ಯುವಕರು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಉಜ್ವಲ್ ಗೌಡ ತಮಗೆ ಸೇರಿದ ಜಾಗ ಇದು ಎಂದು ಬೇಲಿ ಹಾಕುತ್ತಿರುವ ಬಗ್ಗೆ ತಕರಾರು ತೆಗೆದಿದ್ದು ಕಾರ್ಮಿಕ ಕೊಯ್ಯೂರು ಗ್ರಾಮದ ನೀರಕಜೆ ನಿವಾಸಿ ಮಧು ಎಂಬಾತನಿಗೆ ಜಾತಿ ನಿಂದನೆ ಮಾಡಿ ಆತನ ಮೇಲೆ ಏ.11ರಂದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಉಜ್ವಲ್ ಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Exit mobile version