Site icon Suddi Belthangady

ಜೈನ ಧರ್ಮಕ್ಕೆ ಅಪಮಾನ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ,ರಾಜು ಶೆಟ್ಟಿ ವಿರುದ್ಧ ಜೈನ ಬಾಂಧವರಿಂದ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನಗೊಳಿಸಿ ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ರಾಜು ಶೆಟ್ಟಿ ಎಂಬವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಜಿರೆ ಓಡಲ ನಿವಾಸಿ ಅಜಯ್ ಕುಮಾರ್ ಪಿ.ಕೆ. ಅವರು ಎ.೭ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಠಾಣಾ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರಮಠ್ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ದೂರಿನ ವಿವರ: ಸಾಮಾಜಿಕ ಜಾಲತಾಣದಲ್ಲಿ ಒಂದು ಆಡಿಯೋ ಸಂಭಾಷಣೆಯ ತುಣುಕು ಹರಿದಾಡುತ್ತಿದೆ. ಆಡಿಯೋದಲ್ಲಿ ಕೇಳಿ ಬರುತ್ತಿರುವ ಸ್ವರವನ್ನು ಆಲಿಸಿದಾಗ ಚಿರಪರಿಚಿತ ಸ್ವರವಾಗಿದ್ದು ಇದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ಅವರ ಸಂಭಾಷಣೆಯ ಸ್ವರವಾಗಿರುತ್ತದೆ.

ಆಡಿಯೋದಲ್ಲಿ ಜೈನರನ್ನು ಹಾಗೂ ಜೈನ ಧರ್ಮವನ್ನು ಅತ್ಯಂತ ಅವಹೇಳನಕಾರಿಯಾಗಿ ಇಬ್ಬರು ಮಾತಾನಾಡಿದ್ದು ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಅಡಿಯೋದಲ್ಲಿ ದುಡ್ಡು ಹಿಂದುಲೇನನೆ ಜೈನೆರೆನ ಅತ್ತತ್ತ,. ದುಡ್ಡು ಹಿಂದುಲೆನನೆ ದುರುಪಯೋಗ ಮಲ್ಪರ ಅಕುಲು ಆಂಡಲಾ ನಮ್ಮಕ್ಕುಲೆಗು ಗೊತ್ತಾಪುಜಿ ನನಲಾ ಅವು ಬೇಜಾರ್ ಮೂಲುಲ ಅಂಚನೆ ಉಂಡು ನಮ್ಮ ಅಜಿಲ ಸೀಮೆಲ ಅಂಚನೆ ಉಂಡು ಮೊಕುಲೆನ್ ಬುಳೆವರೇ ಬುಡಿಯಾರೇ ಬಲ್ಲಿ ನೆಟ್ ಪೆಟ್ ತಿಂದೆಂರ್ಡ ಅಡೆಗ್ ಜೈನೆರರ್ನ ಆಡಳಿತ ಮುಗಿಯಿಂಡ್. ಈ ಜೈನೆರೆಗ್ ಅವೊಂಜಿ ಸುಪ್ರಿಂಕೋರ್ಟ್ ಎಂದು ಹೇಳಿರುವುದಲ್ಲದೆ ಜೈನರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೈನ ಜಾತಿಯನ್ನು ನಿಂದಿಸಿರುತ್ತಾರೆ ಎಂದು ಅಜಯ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಭಾಷಣೆಯನ್ನು ಆಲಿಸಿದಾಗ ಚಿರಪರಿಚಿತ ಸ್ವರಗಳಾದ ಉಜಿರೆಯ ಕುಂಜರ್ಪ ಎಂಬಲ್ಲಿಯ ನಿವಾಸಿಯಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಬಡಗಕಾರಂದೂರು ರಾಜು ಶೆಟ್ಟಿ ಇವರದ್ದಾಗಿರುತ್ತದೆ.

ಫೋನ್‌ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ಇವರು ಮಾತಾನಾಡಿದ ಸಂಭಾಷಣೆಯ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದು ಜೈನ ಜಾತಿಗೆ ಅಪಮಾನ ಹಾಗೂ ಜೈನ ಧರ್ಮದ ಬಗ್ಗೆ ನಿಂದಿಸಿ ಸಮಾಜದ ಅಶಾಂತಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಅಪಾದಿಸಲಾಗಿದೆ. ಜೈನರ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿ ಆಘಾತವನ್ನುಂಟು ಮಾಡುವ ಉzಶದಿಂದ ದ್ವೇಷ ಭಾವನೆಯಿಂದ ಕೃತ್ಯವನ್ನು ಮಾಡಿದ್ದು ಇವರಿಬ್ಬರ ವಿರುದ್ಧ ಮೇಲೆ ಮೇಲಿನ ಅಪರಾಧಕ್ಕಾಗಿ ಹಾಗೂ ತಮ್ಮ ತನಿಖೆಯ ವೇಳೆ ಕಂಡು ಬರುವ ಎಲ್ಲಾ ರೀತಿಯ ಅಪರಾಧಕ್ಕಾಗಿ ಸೂಕ್ತ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿ ಕೊಡಬೇಕುಯ ಎಂದು ಅಜಯ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮನವಿ ನೀಡುವ ಸಂದರ್ಭದಲ್ಲಿ ದೂರುದಾರ ಅಜಯ್ ಕುಮಾರ್ ಜೈನ್ ಪಿ.ಕೆ, ಪುಷ್ಪರಾಜ್ ಜೈನ್ ಮಡಂತ್ಯಾರು, ವಕೀಲ ಶಶಿಕಿರಣ್ ಜೈನ್, ಶೀತಲ್ ಜೈನ್, ಸುಕೇಶ್ ಜೈನ್ ಕಡಂಬು, ಸುನೀಶ್ ಜೈನ್ ಕಡಂಬು, ಆರಿಹಂತ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Exit mobile version