Site icon Suddi Belthangady

ಎಲ್.ಐ.ಸಿ ನಿವೃತ್ತ ಎಂ.ಡಿ. ಸುಶೀಲ್ ಕುಮಾರ್ ಧರ್ಮಸ್ಥಳ ಭೇಟಿ

ಧರ್ಮಸ್ಥಳ: ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಆಡಳಿತ ನಿರ್ದೇಶಕ ಸುಶೀಲ್ ಕುಮಾರ್ ಸತಿ ಪತ್ನಿ ಎ. 10ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಔಪಚಾರಿಕ ಮಾತುಕತೆ ನಡೆಸಿ ಶ್ರೀ ದೇವರ ದರ್ಶನ ಮಾಡಿದರು.

ದೇವಸ್ಥಾನದ ಪರವಾಗಿ ಹೆಗ್ಗಡೆ ಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಇವರ ನ್ನು ಸ್ವಾಗತಿಸಿದರು. ಎಲ್. ಐ. ಸಿ ಬೆಳ್ತಂಗಡಿ ಸಂಪರ್ಕ ಶಾಖೆ ಮ್ಯಾನೇಜರ್ ವಿ. ಎಸ್. ಕುಮಾರ್, ಉಡುಪಿ ವಿಭಾಗದ ಪ್ರಾಡಕ್ಟ್ ಮ್ಯಾನೇಜರ್ ದುರ್ಗಾರಾಮ ಶೆಣೈ, ಡೆವಲಪ್ಮೆಂಟ್ ಆಫೀಸರ್ ಉದಯಶಂಕರ್ ಉಪಸ್ಥಿತರಿದ್ದರು.

Exit mobile version